ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

 ಜಮಖಂಡಿ ನಗರದಲ್ಲಿ ಸಂಘದ ಅಧ್ಯಕ್ಷ ರಿಯಾಜ್ ಅಹ್ಮದ್ ಅವಟಿ ಮಾತನಾಡಿದರು. ಮೌಲಾಸಾಬ ನದ್ಾ, ರಫಿಕ ಬಾರಿಗಡ್ಡಿ, ಮಹಿಬೂಬಬ ಉಮರಾಣಿ ಇತರರಿದ್ದರು.
ಜಮಖಂಡಿ ನಗರದಲ್ಲಿ ಸಂಘದ ಅಧ್ಯಕ್ಷ ರಿಯಾಜ್ ಅಹ್ಮದ್ ಅವಟಿ ಮಾತನಾಡಿದರು. ಮೌಲಾಸಾಬ ನದ್ಾ, ರಫಿಕ ಬಾರಿಗಡ್ಡಿ, ಮಹಿಬೂಬಬ ಉಮರಾಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಅಬ್ದುಲ್ ಕಲಾಂ ಸಾಮಾಜಿಕ ಸೇವಾ ಸಂಘ ಉದ್ಘಾಟನೆ
  • ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶ
  • ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಅರಿವು ಮೂಡಿಸಿ
ಜಮಖಂಡಿ: ನಗರದ ಹಜರತ್ ಅಬೂಬಕರ್ ಮೈನಾರಿಟಿ ಹಾಲ್‌ನಲ್ಲಿ ಜು. 12ರಂದು ಡಾ. ಅಬ್ದುಲ್ ಕಲಾಂ ಸಾಮಾಜಿಕ ಸೇವಾ ಸಂಘದ ಉದ್ಘಾಟನೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಮಖಂಡಿ ತಾಲೂಕಿನ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಿಯಾಜ್ ಅಹ್ಮದ್ ಅವಟಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯ ಸಂಘದಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖಂಡ ಮಹಿಬೂಬ ಉಮರಾಣಿ ಮಾತನಾಡಿ, ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಅರಿವು ಮೂಡಿಸಿ, ಅರ್ಹ ಲಾನುಭವಿಗಳಿಗೆ ಆ ಯೋಜನೆಗಳ ಸೌಲಭ್ಯಗಳು ತಲುಪುವಂತೆ ಮಾಡುವುದೇ ಸಂಘದ ಪ್ರಮುಖ ಉದ್ದೇಶವಾಗಿದೆ ಎಂದರು.
ಮುಖಂಡ ಮೌಲಾಸಾಬ ನದಾ ಮಾತನಾಡಿ, ಡಾ. ಅಬ್ದುಲ್ ಕಲಾಂ ಸಾಮಾಜಿಕ ಸೇವಾ ಸಂಘದ ವತಿಯಿಂದ ಮುಸ್ಲಿಂ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣುಮಕ್ಕಳಿಗಾಗಿ ಅ.22ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದಾಜು 30 ನವಜೋಡಿಗಳಿಗೆ 60 ಸಾವಿರದ ವರೆಗೆ ಸುರಗಿ ಸಾಮಾನುಗಳನ್ನು ವಿತರಿಸಲಾಗುವದು ಎಂದರು.
ಸಂಘದ ಎಲ್ಲ ಸದಸ್ಯರ ಹಾಗೂ ಸಮಾಜದ ಸಹಕಾರದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಮುಖಂಡ ರಫೀಕ್ ಬಾರಿಗಡ್ಡಿ ಮಾತನಾಡಿ, ಮುಸ್ಲಿಂ ಸಮಾಜ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಂದುವರೆಯಬೇಕಾಗಿದೆ. ಮುಸ್ಲಿಂ ಸಮಾಜವನ್ನು ಎಲ್ಲಾ ರಂಗಗಳಲ್ಲಿ ಮೇಲೆತ್ತುವ ಕಾರ್ಯ ಸಂಘದಿಂದ ಮಾಡಲಾಗುವದು ಎಂದರು.
ಅಬ್ದುಲ ಗೂರ್ ಪಾರ್ಥನಳ್ಳಿ, ಮಕ್ಬೂಲ್ ಅಥಣಿಕರ, ಖಿಜರ ಪೆಂಡಾರಿ, ಸಾಧೀಕ ಪಠಾಣ, ದಾವೂದ ಅವಟಿ, ಸಲಿಂ ಮುಧೋಳ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net