ಅಪಘಾತ ಹೆಚ್ಚಾಗಿ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಎಚ್ಚರಿಕೆ ಫಲಕಗಳ ಅಳವಡಿಕೆ, ವೇಗ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಅನುಷ್ಠಾನಗೊಳಿಸಿದ ಬಗ್ಗೆ ಸಂಬAಽಸಿದ ಇಲಾಖೆಗಳು ಮಾಹಿತಿ ನೀಡುವ ಕೆಲಸವಾಗಬೇಕು. ಪಾರ್ಕಿಂಗ್ ವ್ಯವಸ್ಥೆ, ಸೌಲಭ್ಯಗಳ ಹಾಗೂ ಇತರೆ ಕಾರ್ಯ ಕೈಗೊಂಡ ಬಗ್ಗೆ ಅನುಸರಣಾ ವರದಿ ನೀಡಬೇಕು. ಕೆಲವೊಂದು ಹೆದ್ದಾರಿ ರಸ್ತೆಗಳಲ್ಲಿ ಬಿಳಿ ಪಟ್ಟಿ ಇರುವುದಿಲ್ಲ. ಬಿಳಿ ಪಟ್ಟಿ ಹಾಕಲು ತಕ್ಷಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.