ಪೆಟ್ರೋಲ್ ಬಂಕ್‌ಗಳಿಗೆ ತಹಸೀಲ್ದಾರ್ ದಿಢೀರ್ ಭೇಟಿ

ಇಳಕಲ್ಲದ ಪೆಟ್ರೋಲ್ ಬಂಕ್‌ಗಳಿಗೆ ತಾಲೂಕು ದಂಡಾಽಕಾರಿ ಅಮರೇಶ ಪಮ್ಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ ನೀರಿಕ್ಷಕ ಮಹಾಂತೇಶ ಗೌಡರ, ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ ಕಲ್ಮಠ, ಕಂದಾಯ ನೀರಿಕ್ಷಕ ನವೀನ ಬಲಕುಂದಿ ಇದ್ದರು.
ಇಳಕಲ್ಲದ ಪೆಟ್ರೋಲ್ ಬಂಕ್‌ಗಳಿಗೆ ತಾಲೂಕು ದಂಡಾಽಕಾರಿ ಅಮರೇಶ ಪಮ್ಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ ನೀರಿಕ್ಷಕ ಮಹಾಂತೇಶ ಗೌಡರ, ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ ಕಲ್ಮಠ, ಕಂದಾಯ ನೀರಿಕ್ಷಕ ನವೀನ ಬಲಕುಂದಿ ಇದ್ದರು.
Published on
ಇಳಕಲ್ಲ: ನಗರದ ಪೆಟ್ರೋಲ್ ಬಂಕ್‌ಗಳಿಗೆ ತಾಲೂಕು ದಂಡಾಧಿಕಾರಿ ಅಮರೇಶ ಪಮ್ಮಾರ ಸೋಮವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರದಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ತೆರಳಿ, ಕುಡಿಯುವ ನೀರು, ಶೌಚಗೃಹ, ಫ್ರೀ ಏರ್ ಸರ್ವೀಸ್, ಕೆಲಸಗಾರ ಸಮಯದ ವೇಳಾ ಪಟ್ಟಿ, ಆಗಮನ-ನಿರ್ಗಮನ ನಾಮ ಫಲಕಗಳ ಸೇರಿ ಪೆಟ್ರೋಲ್, ಡಿಸೇಲ್ ಗುಣಮಟ್ಟವನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಮೂಲ ಸೌಲಭ್ಯ ಇಲ್ಲದ ಪೆಟ್ರೋಲ್ ಬಂಕ್‌ಗಳಿಗೆ ನೋಟಿಸ್ ನೀಡಿ, ಒಂದು ವಾರದೊಳಗೆ ಸರಿಪಡಿಸಿಕೊಳ್ಳುವಂತೆ ಹೇಳಿದರು.
ಆಹಾರ ನೀರಿಕ್ಷಕ ಮಹಾಂತೇಶ ಗೌಡರ, ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ ಕಲ್ಮಠ, ಕಂದಾಯ ನೀರಿಕ್ಷಕ ನವೀನ ಬಲಕುಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net