ಉಪ ಲೋಕಾಯುಕ್ತರಿಂದ ಸು-ಮೋಟೋ ಕೇಸ್

ಬಾಗಲಕೋಟೆ ನವನಗರ ಬಸ್ ನಿಲ್ದಾಣಕ್ಕೆ ಗುರುವಾರ ಬೆಳ್ಳಂ ಬೆಳಗ್ಗೆ ದಿಢೀರ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅಲ್ಲಿ ಬಸ್‌ಗಾಗಿ ಕಾಯ್ದು ನಿಂತಿದ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿದರು.
ಬಾಗಲಕೋಟೆ ನವನಗರ ಬಸ್ ನಿಲ್ದಾಣಕ್ಕೆ ಗುರುವಾರ ಬೆಳ್ಳಂ ಬೆಳಗ್ಗೆ ದಿಢೀರ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅಲ್ಲಿ ಬಸ್‌ಗಾಗಿ ಕಾಯ್ದು ನಿಂತಿದ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿದರು.
Published on
ಬಾಗಲಕೋಟೆ: ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗುರುವಾರ ಬೆಳ್ಳಂ ಬೆಳಗ್ಗೆ ನವನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕಣ್ಣಾರೆ ಕಂಡು ಅದರಿಂದ ತೀವ್ರ ಬೇಸರ ವ್ಯಕ್ತಪಡಿಸಿ, ಅವ್ಯವಸ್ಥೆ ವಿರುದ್ಧ ಇಲಾಖೆ ಅಽಕಾರಿಗಳ ವಿರುದ್ಧ ಸು-ಮೋಟೋ ಕೇಸ್ ದಾಖಲಿಸಿದ್ದಾರೆ.
ಬೆಳಗ್ಗೆ ನವನಗರ ಬಸ್ ನಿಲ್ದಾಣಕ್ಕೆ ತೆರಳಿದ ವೇಳೆ ಅಲ್ಲಿ ಎಲ್ಲವೂ ಅವ್ಯವಸ್ಥೆಯಿಂದ ಕೂಡಿತ್ತು. ಎಲ್ಲೆಂದರಲ್ಲಿ ಕಸ, ಖಾಲಿ ಬಾಟಲಿಗಳು ರಾರಾಜಿಸುತ್ತಿದ್ದವು. ನಿಲ್ದಾಣದಲ್ಲಿ ಇರುವ ಹೋಟೆಲ್‌ಗೆ ತೆರಳಿದಾಗ ಅಲ್ಲಿಯೂ ಉಪಹಾರ ಓಪನ್ ಆಗಿ ಇಡಲಾಗಿತ್ತು. ನಿಲ್ದಾಣದಲ್ಲಿ ಸ್ವಚ್ಚತೆಗೆ ಆಧ್ಯತೆ ಇರಲಿಲ್ಲ. ಇದರಿಂದ ಸ್ವಪ್ರೇರಿತರಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.
ಇನ್ನು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಗಂಟೆಗಟ್ಟಲೇ ವಿದ್ಯಾರ್ಥಿಗಳು ಕಾಯುತ್ತಿರುವುದನ್ನು ಗಮನಿಸಿ ವಿದ್ಯಾರ್ಥಿಗಳ ಬಳಿಗೆ ತೆರಳಿ ಅವರ ಸಮಸ್ಯೆ ಆಲಿಸಿದರು. ಬೆಳಗ್ಗೆ ೯ ಗಂಟೆಗೆ ಕ್ಲಾಸ್‌ಗಳಿಗೆ ತೆರಳಬೇಕು. ಬಸ್ ತಡವಾಗಿ ಬರುತ್ತಿವೆ ಎಂದು ಕೇಳಿ, ಈ ಬಗ್ಗೆ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಫ್ರಿ ಬಸ್ ಯೋಜನೆ ಜಾರಿಗೆ ತಂದಿದೆ. ಅದನ್ನು ಅನುಷ್ಠಾನ ಮಾಡಬೇಕಾದ ಅಽಕಾರಿಗಳು ಲೋಪ ಮಾಡುತ್ತಿರುವುದರಿಂದ ಯೋಜನೆ ಸರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಮೂರು ದಿನ ನಾನು ಬಾಗಲಕೋಟೆಯಲ್ಲೆ ಇರುತ್ತೇನೆ. ಅಷ್ಟರಲ್ಲಿ ಬಸ್ ಸಮಸ್ಯೆ ಬಗೆಹರಿಸಬೇಕು. ಶಾಲೆ, ಕಾಲೇಜು ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿಗಳ ಪ್ರಮಾಣಕ್ಕೆ ತಕ್ಕಂತೆ ಬಸ್ ಸೌಲಭ್ಯ ಕಲ್ಪಿಸುವಂತೆ ವಿಭಾಗೀಯ ನಿಯಂತ್ರಣಾಽಕಾರಿ ಎನ್.ಟಿ.ಪಾಟೀಲ ಅವರಿಗೆ ಖಡಕ್ ಸೂಚನೆ ನೀಡಿದರು.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ, ಸ್ವಚ್ಛತೆ, ಮಾಹಿತಿ ವ್ಯವಸ್ಥೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಅಽಕಾರಿಗಳಿಗೆ ನಿರ್ದೇಶನ ನೀಡಿದರು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ನಿಗದಿತ ಅವಽಯಲ್ಲಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತರು ಸೂಚಿಸಿದರು.
ಭೇಟಿ ವೇಳೆಯಲ್ಲಿ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ. ಸೇಷನ್ ಜಡ್ಜ ಅರವಿಂದ, ಜಿಲ್ಲಾಽಕಾರಿ ಸಂಗಪ್ಪ, ಜಿ.ಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ದಾರ್ಥ ಗೋಯಲ್, ಲೋಕಾಯುಕ್ತ ಇಲಾಖೆಯ ಬಾಗಲಕೋಟೆ ಎಸ್.ಪಿ ನಂದಗಾAವಿ, ಡಿಎಸ್ಪಿ ಸುರೇಶ ರೆಡ್ಡಿ, ಉಪ ವಿಭಾಗಾಽಕಾರಿ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಾಸುದೇವ ಸ್ವಾಮಿ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net