ಡಿ.ಆರ್. ಪರ್ವತೀಕರ ಶಿಷ್ಯವೇತನಕ್ಕೆ ಸುಮತಿ ಆಯ್ಕೆ

ನಾದಯೋಗಿ ಡಿ.ಆರ್. ಪರ್ವತೀಕರ ಶಿಷ್ಯವೇತನಕ್ಕೆ ಆಯ್ಕೆಯಾದ ಸುಮತಿ ಮುರಗೋಡ ಅವರಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಎ.ಎಂ ಖಾನ ಶಿಷ್ಯವೇತನ ವಿತರಿಸಿದರು.
ನಾದಯೋಗಿ ಡಿ.ಆರ್. ಪರ್ವತೀಕರ ಶಿಷ್ಯವೇತನಕ್ಕೆ ಆಯ್ಕೆಯಾದ ಸುಮತಿ ಮುರಗೋಡ ಅವರಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಎ.ಎಂ ಖಾನ ಶಿಷ್ಯವೇತನ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ
  • ನಾದಯೋಗಿ ಡಿ.ಆರ್. ಪರ್ವತೀಕರ ಶಿಷ್ಯವೇತನ
ಗುಳೇದಗುಡ್ಡ: ಪಟ್ಟಣದ ಸುಮತಿ ಪ್ರಕಾಶ ಮುರಗೋಡ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ನೀಡುವ ನಾದಯೋಗಿ ಡಿ.ಆರ್. ಪರ್ವತೀಕರ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ.
ಗದಗದ ವೀರೇಶ್ವರ ಪುಣ್ಯಾಶ್ರಮದ ಪಿ.ಪಿ.ಜಿ ಸಂಗೀತ ಮಹಾವಿದ್ಯಾಲಯದಲ್ಲಿ ಬಿ.ಮ್ಯೂಜಿಕ್ ಅಭ್ಯಾಸ ಮಾಡುತ್ತಿರುವ ಅವರು ಪ್ರಥಮ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಈ ಸಾಧನೆ ಆಧಾರವಾಗಿ ಶಿಷ್ಯವೇತನ ಪಡೆದಿದ್ದಾರೆ.
ಸುಮತಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಐದು ವರ್ಷಗಳ ಕಾಲ ಪಟ್ಟಣದ ಗಾನಯೋಗಿ ಪಂಚಾಕ್ಷರ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಅಖಂಡೇಶ್ವರ ಎಂ. ಪತ್ತಾರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಶೈಕ್ಷಣಿಕ ಸಾಧನೆ ಮತ್ತು ಸಂಗೀತಾಭ್ಯಾಸದಲ್ಲಿ ತೋರಿದ ಪ್ರತಿಭೆಗೆ ಈ ಶಿಷ್ಯವೇತನ ದೊರೆತಿರುವುದು ಗಮನಾರ್ಹವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net