ಆದರೆ, ಬೋಟ್‌ನ ನಾವಿಕನ ಜಾಣ್ಮೆಯಿಂದಾಗಿ ಬೋಟ್ ದಡದ ವರೆಗೆ ತೆಗೆದುಕೊಂಡು ಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ರೈತರಿಗೆ ಎದುರಾಗಿರುವ ಈ ಸಂಕಷ್ಟಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ. ಸೇತುವೆ ನಿರ್ಮಾಣಮಾಡಿ ಎನ್ನುವ ಅಲ್ಲಿನ ರೈತರ ಕೂಗಿಗೆ ಸರ್ಕಾರ ಕವಡೆ ಕಿಮ್ಮತ್ತು ಕೊಡದಿರುವುದು ಇಂತ ಅವಘಡಗಳನ್ನು ನಾವು ಎದುರಿಸಬೇಕಿದೆ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.