ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಗುರುದೇವಾಶ್ರಮದ ಗುರುಪ್ರಸಾದ ಸ್ವಾಮೀಜಿ ಉದ್ಘಾಟಿಸಿದರು. ಪ್ರಾಚಾರ್ಯ ಎಂ.ಎಲ್.ಪಾಟೀಲ, ಕೆಪಿಎಸ್ ಉಪಾಧ್ಯಕ್ಷ ಬಾಹುಬಲಿ ಕವಟಕೊಪ್ಪ, ಉಪಪ್ರಾಚಾರ್ಯ ಬಿ.ಎಂ.ಬಳೂಲಮಟ್ಟಿ, ಉಪನ್ಯಾಸಕ ಕೆ.ಬಿ.ಬೆಳಗಲಿ, ಬಸವರಾಜ ಹರೋಲಿ, ರಾವಸಾಬ ಪಾಟೀಲ, ಮಹಾದೇವ ಭಿಮನಹಳ್ಳಿ, ಸಂಜು ಹೆಗ್ಗಳಗಿ, ಶಿವಾನಂದ ಶಿಂಗೆ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗುರುದೇವಾಶ್ರಮದ ಗುರುಪ್ರಸಾದ ಸ್ವಾಮೀಜಿ ಹೇಳಿಕೆ
ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ
ಜಮಖಂಡಿ: ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಿಸೈಲ್ ಮ್ಯಾನ್ ಖ್ಯಾತಿಯ ವಿಜ್ಞಾನಿ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗಲೂ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಹನ ನಡೆಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದರು ಎಂದು ಗುರುದೇವಾಶ್ರಮದ ಗುರುಪ್ರಸಾದ ಸ್ವಾಮೀಜಿ ಹೇಳಿದರು.
ತಾಲೂಕಿನ ಮೈಗೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ 2000-01ರ 7ನೇ ತರಗತಿ ಹಾಗೂ 2003-04ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮುಂದೆ ಗುರಿ ಮತ್ತು ಹಿಂದೆ ಗುರುವಿನ ಮಾರ್ಗದರ್ಶನವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು.
ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಂ.ಡಿ. ತೇಲಸಂಗ ಮಾತನಾಡಿ, ಜಗತ್ತಿನ ಎಲ್ಲ ಉನ್ನತ ಹುದ್ದೆಗಳಿಗೂ ಮಾಜಿ ಎಂಬ ಪಟ್ಟವಿರುತ್ತದೆ. ಆದರೆ ಶಿಕ್ಷಕರಿಗೆ ಎಂದಿಗೂ ಮಾಜಿ ಇರುವುದಿಲ್ಲ. ವಿದ್ಯಾರ್ಥಿಗಳು ಕಲಿಸಿದ ಗುರುಗಳು ಎಂದು ಸದಾ ಗೌರವಿಸುತ್ತಾರೆ. ಹಾಗಾಗಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದುದು ಎಂದರು.
ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಆರ್‌ಸಿ ಸೆಂಟರ್ ದ್ವಾರದಿಂದ ಮುಖ್ಯ ವೇದಿಕೆಯವರೆಗೆ ವಾದ್ಯಮೇಳ ಹಾಗೂ ಪುಷ್ಪವೃಷ್ಠಿಯ ಮೂಲಕ ಭವ್ಯವಾಗಿ ಮೆರವಣಿಗೆಯ ಹಾರ್ದಿಕವಾಗಿ ಬರಮಾಡಿಕೊಂಡಿದ್ದು ಗ್ರಾಮಸ್ಥರ ಗಮನ ಸೆಳೆಯಿತು. ಮೃತಪಟ್ಟ ಶಿಕ್ಷಕರು ಹಾಗೂ ಸಹಪಾಠಿಗಳಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿವೃತ್ತ ಶಿಕ್ಷಕರಾದ ಎಸ್.ಎಂ.ಹರಗೆ, ಜಿ.ಎಸ್.ಹಡಪದ, ಎನ್.ಎಸ್.ಪತ್ತಾರ, ಶಿಕ್ಷಕರಾದ ಪಿ.ಎಸ್.ಹಲ್ಯಾಳ, ರಮೇಶ ಮೂಡಲಗಿ ಸೇರಿದಂತೆ ಹಲವರು ಮಾತನಾಡಿದರು. ಎಸ್.ಎ. ಕಕಮರಿ, ಎಲ್.ಎಸ್. ತುಂಗಳ, ಆರ್.ಬಿ. ಮುಧೋಳ, ಭಾರತಿ ಕುಲಕರ್ಣಿ, ಎಸ್.ಪಿ. ತಳವಾರ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಎಂ.ಎಲ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಪಿಎಸ್ ಉಪಾಧ್ಯಕ್ಷ ಬಾಹುಬಲಿ ಕವಟಕೊಪ್ಪ, ಉಪಪ್ರಾಚಾರ್ಯ ಬಿ.ಎಂ.ಬಳೂಲಮಟ್ಟಿ, ಉಪನ್ಯಾಸಕ ಕೆ.ಬಿ.ಬೆಳಗಲಿ, ಬಸವರಾಜ ಹರೋಲಿ, ರಾವಸಾಬ ಪಾಟೀಲ, ಮಹಾದೇವ ಭಿಮನಹಳ್ಳಿ, ಸಂಜು ಹೆಗ್ಗಳಗಿ, ಶಿವಾನಂದ ಶಿಂಗೆ ಇತರರು ಇದ್ದರು.