ಪಟ್ಟಣದ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಹಮ್ಮಿಕೊಂಡ ಸೃಜನೋತ್ಸವ 2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಗುರಿ, ಕಲಿಕೆ, ಧೈರ್ಯ ಈ ಮೂರು ವಿಚಾರಗಳನ್ನು ಎಂದಿಗೂ ಮರೆಯಬಾರದು. ಜತೆಗೆ ಪಾಲಕರು ಮಕ್ಕಳ ಸೃಜನಶೀಲತೆಗೆ ಕೈ ಜೋಡಿಸಬೇಕು. ಕೆಲಸದಲ್ಲಿ ಮನಸ್ಸನ್ನು ತೊಡಗಿಸಿ ಕಾರ್ಯನಿರ್ವಹಿಸಿದರೆ ಗೆಲುವು ಸಾಧ್ಯ ಎಂದರು.