ಅಬಕಾರಿ ಉಪ ಆಯುಕ್ತ ತಿಪ್ಪೆಸ್ವಾಮಿ ಡಿ.ಎನ್. ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಏಪ್ರೀಲ್-2025 ರಿಂದ ಜನವರಿ-2026 ವರೆಗೆ ಒಟ್ಟು 1341 ಕಳ್ಳಬಟ್ಟಿಗಳ ಸಾರಾಯಿ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದು, 110 ಪ್ರಕರಣಗಳನ್ನು ದಾಖಲಿಸುವ ಮೂಲಕ 110 ಜನರನ್ನು ಬಂಧಿಸಲಾಗಿದೆ. 799 ಲೀಟರ್ ಕಳ್ಳಬಟ್ಟಿ ಸಾರಾಯಿ, 1086 ಕೆಜಿ ಬೆಲ್ಲದ ಕೊಳೆ ಜೊತೆಗೆ 1 ಆಟೋ, 33 ಟಿಡಬ್ಲೂ, ಒಂದು ಬೈಸಿಕಲ್ ವಶಕ್ಕೆ ಪಡೆಯಲಾಗಿದೆ. 6 ಪ್ರಕರಣಗಳಿಗೆ 11 ಆರೋಪಿಗಳಿಗೆ ಪ್ರತಿಯೊಬ್ಬರಿಗೂ 1 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ.ಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ. ಅಲ್ಲದೆ ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಇಲ್ಲಿಯವರೆಗೆ 2.199 ಕೆಜಿ ಗಾಂಜಾ, 11 ಹಸಿ ಗಾಂಜಾ ಗಿಡಗಳು, 1 ದ್ವಿಚಕ್ರ ವಾಹನ, 1 ಮೊಬೈಲ್ ಜೊತೆಗೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಭೆಗೆ ತಿಳಿಸಿದರು.