ಮಹಾಲಿಂಗಪುರ ಸಮೀಪದ ಸೈದಾಪೂರ ಗ್ರಾಮದಲ್ಲಿ ಶರಣ ದಿ. ಬಾಬುರಾವ ಹಾದಿಮನಿ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾರುತಿ ಶರಣರು ಮಾತನಾಡಿದರು. ಜನಾರ್ಧನ ಸ್ವಾಮೀಜಿ, ಮಲಗೌಡ ಪಾಟೀಲ, ರಾಮನಗೌಡ ಪಾಟೀಲ ಇತರರಿದ್ದರು.
ಮಹಾಲಿಂಗಪುರ: ಸಜ್ಜನರ ಸಹವಾಸದಲ್ಲಿದ್ದು, ಧರ್ಮ ಮಾರ್ಗದಲ್ಲಿ ನಡೆದು ಸತ್ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ಚಿಕ್ಕಗಲಗಲಿಯ ಶ್ರದ್ಧಾನಂದ ಮಠದ ಜನಾರ್ಧನ ಸ್ವಾಮೀಜಿ ಹೇಳಿದರು.
ಸೈದಾಪೂರ ಗ್ರಾಮದಲ್ಲಿ ಶರಣ ಜೀವಿ ದಿ. ಬಾಬುರಾವ ಹಾದಿಮನಿ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಜರುಗಿದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧ್ಯಾತ್ಮ ಮತ್ತು ಸತ್ಸಂಗದ ಮೂಲಕ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಕಂಕನವಾಡಿಯ ಮಾರುತಿ ಶರಣರು ಮಾತನಾಡಿ, ದಿ. ಬಾಬುರಾವ ಹಾದಿಮನಿ ಅವರು ಸಂಸಾರ ಮತ್ತು ಅಧ್ಯಾತ್ಮ ಎರಡೂ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿ ಬದುಕಿದವರು. ಜಾತಿ, ಮತ ಭೇದವಿಲ್ಲದೆ ಮಠ-ಮಂದಿರಗಳ ಅಭಿವೃದ್ಧಿಗೆ ಶ್ರಮಿಸಿದ ಅವರ ಜೀವನ ಮಾದರಿಯಾಗಿದೆ ಎಂದು ಹೇಳಿದರು. ಅವರ ಅಧ್ಯಾತ್ಮ ಸಂಸ್ಕಾರವನ್ನು ಕುಟುಂಬಸ್ಥರು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.
ಹಾದಿಮನಿ ಕುಟುಂಬಸ್ಥರು ಪೂಜ್ಯರು ಹಾಗೂ ಶರಣರನ್ನು ಸನ್ಮಾನಿಸಿದರು. ಕಪ್ಪಲಗುದ್ದಿಯ ವಿಶೇಷ ಚೇತನ ಸಂಗೀತ ಶಿಕ್ಷಕ ಕುಮಾರ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಚಂದ್ರಶೇಖರ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲಗೌಡ ಪಾಟೀಲ, ಅಲಗೌಡ ಪಾಟೀಲ, ಮಹಾಲಿಂಗಪ್ಪ ಜಕ್ಕನ್ನವರ, ಮಲ್ಲಪ್ಪ ಸಿಂಗಾಡಿ, ರಾಮು ಹಾದಿಮನಿ, ಚೇತನ ಹಾದಿಮನಿ, ಬಸವರಾಜ ಶಿರೋಳ, ರಾಮನಗೌಡ ಪಾಟೀಲ, ಎಸ್.ಎಸ್. ಮೆಣಸಪ್ಪಗೋಳ, ಸಂತೋಷ ಕುರುಬರ, ರಮೇಶ್ ಕಲಾದಗಿ, ವಿಜಯ ಹಾದಿಮನಿ ಸೇರಿ ಹಲವರು ಉಪಸ್ಥಿತರಿದ್ದರು.