ಸ್ಪರ್ಶದರ್ಶನ ಕೇವಲ ಕೈಮುಟ್ಮಟಿ ಹಣೆಹಚ್ಚುವುದಲ್ಲ

ತೇರದಾಳ ಪಟ್ಟಣದ ಅಲ್ಲಮಪ್ರಭುದೇವರ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಹಾಗೂ ಧರ್ಮಸಭೆಯನ್ನು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀನಿವಾಸ ಆಚಾರ್ಯ, ಕೆ.ವಿ.ಸತ್ಯಬ್ರಹ್ಮಾಚಾರ್ಯ, ಗಂಗಾಧರದೇವರು, ಶಾಸಕ ಸಿದ್ದು ಸವದಿ ಮತ್ತಿತರರಿದ್ದರು.
ತೇರದಾಳ ಪಟ್ಟಣದ ಅಲ್ಲಮಪ್ರಭುದೇವರ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಹಾಗೂ ಧರ್ಮಸಭೆಯನ್ನು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀನಿವಾಸ ಆಚಾರ್ಯ, ಕೆ.ವಿ.ಸತ್ಯಬ್ರಹ್ಮಾಚಾರ್ಯ, ಗಂಗಾಧರದೇವರು, ಶಾಸಕ ಸಿದ್ದು ಸವದಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿಕೆ
  • ಮಾ.20ರಂದು ಮಲ್ಲಿಕಾರ್ಜುನ ರಥೋತ್ಸವ
  • ಶ್ರೀಶೈಲಂ-ತೇರದಾಳಕ್ಕೆ ಅವಿನಾಭಾವ ಸಂಬಂಧ
ತೇರದಾಳ: ಯುಗಾದಿ ಉತ್ಸವ ಅಂಗವಾಗಿ ಮಾ.20ರಂದು ಶ್ರೀಶೈಲಂನಲ್ಲಿ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಜರುಗಲಿದೆ ಎಂದು ಶ್ರೀಶೈಲ ಪೀಠದ ಸೂರ್ಯಸಿಂಹಾಸನಾಧೀಶ್ವರ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದೆ.
ಪಟ್ಟಣದ ಅಲ್ಲಮಪ್ರಭುದೇವರ ಸಭಾಭವನದಲ್ಲಿ ಅಲ್ಲಮಪ್ರಭು ಸೇವಾ ಸಮಿತಿ, ಪ್ರಭುಲಿಂಗೇಶ್ವರ ಅನ್ನಪ್ರಸಾದ ವಿತರಣಾ ಸಮಿತಿ ಆಶ್ರಯದಲ್ಲಿ ಬುಧವಾರ ಹಮ್ಮಮಿಕೊಂಡಿದ್ದ ಪೂರ್ವಭಾವಿ ಸಭೆ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ತೇರದಾಳ ಮತ್ತು ಶ್ರೀಶೈಲಂ ಕ್ಷೇತ್ರಗಳ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು. ಮುಟ್ಟದರ್ಶನವೆಂದರೆ ಕೇವಲ ಕೈಮುಟ್ಟಿ ಹಣೆಹಚ್ಚುವುದು ಅಲ್ಲ, ಮನಸ್ಸು ಮಲ್ಲಯ್ಯನ ಕಡೆ ನೆಟ್ಟಾಗ ಅದೇ ನಿಜವಾದ ಸ್ಪರ್ಶದರ್ಶನ ಎಂದು ಭಕ್ತರಿಗೆ ಸಂದೇಶ ನೀಡಿದರು. ಭಕ್ತರು ಭಕ್ತಿ ಪ್ರದರ್ಶಿಸಬೇಕು, ಶಕ್ತಿ ಪ್ರದರ್ಶನ ಮಾಡಬಾರದು ಎಂದೂ ಸಲಹೆ ನೀಡಿದರು.
ಶ್ರೀಶೈಲ ಪೀಠದ ಟ್ರಸ್ಟಿ ಕಾರ್ಯನಿರ್ವಹಣಾಧಿಕಾರಿ ಪೋತಗುಂಡಾ ರಮೇಶ್ ನಾಯಕ ಮಾತನಾಡಿ, ಮಾ.6ರಿಂದ 15ರವರೆಗೆ ಸ್ಪರ್ಶದರ್ಶನ ಹಾಗೂ ಮಾ.16ರಿಂದ 20ರವರೆಗೆ ಅಲಂಕಾರಿಕ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸ್ಪರ್ಶದರ್ಶನಕ್ಕೆ ರೂ.500 ಟಿಕೆಟ್ ನಿಗದಿ ಮಾಡಲಾಗಿದ್ದು, ಪ್ರತಿ ಹಂತದಲ್ಲಿ 1500 ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಆನ್‌ಲೈನ್ ಹಾಗೂ ಕರೆಂಟ್ ಬುಕಿಂಗ್ ಮೂಲಕ ಪಡೆಯಬಹುದಾಗಿದೆ.
ಬಿಸಿಲಿನ ತೀವ್ರತೆಯನ್ನು ಗಮನಿಸಿ ಯಾತ್ರಾರ್ಥಿಗಳಿಗೆ ಪ್ರತಿ ಐದು ಕಿ.ಮೀ ಅಂತರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಜಾತ್ರಾ ಸಮಿತಿಗೆ ಸೂಚಿಸಲಾಗಿದೆ. ಶ್ರೀಶೈಲವನ್ನು ಸ್ವಚ್ಛವಾಗಿರಿಸಿ ಘೋಷಣೆಯಡಿ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ವನ್ಯಜೀವಿಗಳ ಸಂರಕ್ಷಣೆಗಾಗಿ ಶಾಂತತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಕರ್ನಾಟಕದ ಭಕ್ತರಿಗೆ ಯಾತ್ರಿ ನಿವಾಸದಲ್ಲಿ ಸೂಕ್ತ ಸೌಲಭ್ಯ ಒದಗಿಸಬೇಕು ಹಾಗೂ ಅರಣ್ಯ ನಿಯಮಗಳಲ್ಲಿ ಅಗತ್ಯ ಸಡಲಿಕೆ ನೀಡಲು ಸಂಬಂಧಿತ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಶ್ರೀಶೈಲಂ ಮುಖ್ಯ ಅರ್ಚಕ ನಾಗರಾಜಶಾಸ್ತ್ರಿ, ಸ್ಥಳೀಯ ಹಿರೇಮಠದ ಗಂಗಾಧರದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ದೇವಸ್ಥಾನ ಸಂಪಾದಕ ಕೆ.ವಿ. ಸತ್ಯಬ್ರಹ್ಮಾಚಾರ್ಯರು ಕನ್ನಡಾನುವಾದ ಮಾಡಿದರು.
ಟ್ರಸ್ಟ್ನ ಅಸಿಸ್ಟಂಟ್ ಎಕ್ಸಿಕೂಟಿವ್ ಆಫೀಸರ್ ಎನ್.ಹರಿದಾಸ, ಸಿನಿಯರ್ ಅಸಿಸ್ಟಂಟ್ ಶ್ರೀನಿವಾಸ ಆಚಾರ್ಯ, ಸುಪರಿಡೆಂಟ್ ಆರ್.ಮಲ್ಲಿಕಾರ್ಜುನ, ಅರ್ಚಕ ಸಿ.ಎಂ.ಗುರುಪಾದಯ್ಯ , ಜಿ.ರಾಘವೇಂದ್ರಕುಮಾರ, ಪರಿಚಾರಕ ಸಾಯಿಕುಮಾರ, ಮಹೇಶ ನಾಯ್ಕ, ಅಲ್ಲಮಪ್ರಭು ಅರ್ಚಕ ಬಸಯ್ಯ ಬಾಂವಿ, ಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿ ಅಧ್ಯಕ್ಷ ಬಸವರಾಜ ಕರಲಟ್ಟಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net