ಮಹಿಳಾ ಸಬಲೀಕರಣಕ್ಕೆ ಕೌಶಲಾಭಿವೃದ್ಧಿಯೇ ಮೂಲಮಂತ್ರ

ಮಹಾಲಿಂಗಪುರದ ಹುರಕಡ್ಲಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಸ್ವುದ್ಯೋಗ ತರಬೇತಿ ಶಿಬಿರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ಮಾತೋಶ್ರೀ ವಿದ್ಯಾವತಿ, ಫೌಂಡೇಷನ್ ಅಧ್ಯಕ್ಷೆ ಸವಿತಾ ಹುರಕಡ್ಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀಶೈಲಪ್ಪ ಹಿಪ್ಪರಗಿ, ಪ್ರಕಾಶ ಬಾಡನವರ ಇತರರಿದ್ದರು.
ಮಹಾಲಿಂಗಪುರದ ಹುರಕಡ್ಲಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಸ್ವುದ್ಯೋಗ ತರಬೇತಿ ಶಿಬಿರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ಮಾತೋಶ್ರೀ ವಿದ್ಯಾವತಿ, ಫೌಂಡೇಷನ್ ಅಧ್ಯಕ್ಷೆ ಸವಿತಾ ಹುರಕಡ್ಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀಶೈಲಪ್ಪ ಹಿಪ್ಪರಗಿ, ಪ್ರಕಾಶ ಬಾಡನವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾತೋಶ್ರೀ ವಿದ್ಯಾವತಿ ಹೇಳಿಕೆ
  • ಉಚಿತ ಸ್ವ-ಉದ್ಯೋಗ ತರಬೇತಿ ಶಿಬಿರ
  • ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮ
ಮಹಾಲಿಂಗಪುರ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸ್ವ-ಉದ್ಯೋಗ ಕೌಶಲ ತರಬೇತಿ ಅತ್ಯಂತ ಅಗತ್ಯವಾಗಿದ್ದು, ಕಲಿತ ವಿದ್ಯೆಯನ್ನು ಸಮಾಜಕ್ಕೆ ಹಂಚಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಕಲಬುರ್ಗಿಯ ಸಿದ್ಧಾರೂಢ ಮಠದ ಮಾತೋಶ್ರೀ ವಿದ್ಯಾವತಿ ಹೇಳಿದರು.
ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಹುರಕಡ್ಲಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಹಿಳೆಯರ ಉಚಿತ ಸ್ವ-ಉದ್ಯೋಗ ತರಬೇತಿ ಶಿಬಿರ ಹಾಗೂ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮಹಿಳೆಯರು ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಕೌಶಲ ಬೆಳೆಸಿ ಸ್ವಂತ ಆದಾಯ ಗಳಿಸುವ ಮೂಲಕ ಆತ್ಮಗೌರವದಿಂದ ಬದುಕಬೇಕು ಎಂದರು. ಹೊಲಿಗೆ, ಆರಿ ಕಲೆ, ಕುಬಸದ ಕಲೆ ಸೇರಿ ವಿವಿಧ ಕೌಶಲ ತರಬೇತಿಗಳು ಸಾವಿರಾರು ಮಹಿಳೆಯರ ಬದುಕಿಗೆ ಹೊಸ ದಿಕ್ಕು ತೋರಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು.
ಹುರಕಡ್ಲಿ ಫೌಂಡೇಷನ್ ಅಧ್ಯಕ್ಷೆ ಸವಿತಾ ಹುರಕಡ್ಲಿ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಯೇ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೆ ಭದ್ರ ಅಡಿಪಾಯವಾಗಿದೆ. ಇದೇ ಉದ್ದೇಶದಿಂದ ಫೌಂಡೇಷನ್ ನಿರಂತರವಾಗಿ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಹೊಲಿಗೆ, ಆರಿ ಕಲೆ ಹಾಗೂ ಕುಬಸದ ಕಲೆಗಳ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.
ಗರ್ಭಿಣಿಯರಿಗೆ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮವನ್ನು ಸಹ ಆಯೋಜಿಸಿ ಗೌರವಿಸಲಾಯಿತು.
ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀಶೈಲಪ್ಪ ಹಿಪ್ಪರಗಿ, ಪ್ರಕಾಶ ಬಾಡನವರ, ಭೀಮಪ್ಪ ಪೂಜಾರಿ, ಮಹಾಲಿಂಗಪ್ಪ ಕಂಠಿ, ಸಂಜು ಬಾರುಕೋಲ, ಮಂಜು ಬಕರೆ, ಮಲ್ಲಪ್ಪ ತೇಲಿ, ಶ್ರೀಶೈಲ ಬಳಗಾರ, ಬಸವರಾಜ ಗಿರಿಸಾಗರ, ಮಹಾದೇವಪ್ಪ ಟಿರಕಿ, ಮಲ್ಲಪ್ಪ ತೇರದಾಳ, ತರಬೇತುದಾರರಾದ ಸಹನಾ ಶಿರೋಳ, ರೂಪಾ ಮಹೇಂದ್ರಕರ, ಸ್ವಾತಿ ಪಾತ್ರೋಟ ಸೇರಿ ಅನೇಕರು ಉಪಸ್ಥಿತರಿದ್ದರು.
ಫೌಂಡೇಷನ್ ಅಧ್ಯಕ್ಷ ಚನಬಸು ಹುರಕಡ್ಲಿ ಸ್ವಾಗತಿಸಿದರು. ಪ್ರೊ. ರವಿ ಕಲ್ಲೋಳ್ಳಿ ನಿರೂಪಿಸಿ, ವಂದಿಸಿದರು. ಕಲಾವಿದ ಚನ್ನಪ್ಪ ಹುನ್ನೂರ ಅವರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net