ಇಳಕಲ್ಲದ ಮಹೇಶ್ವರಿ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಾಮಾನುಜಾಚಾರ್ಯ ಫೌಂಡೇಶನ್ ಹಾಗೂ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಥಲಸ್ಸೆಮಿಯಾ ದಿನಾಚರಣೆ ಹಾಗೂ ಥಲಸ್ಸ್ಸೆಮಿಯಾ ರೋಗ ನಿವಾರಣೆಗಾಗಿ ಅಸ್ತಿಮಜ್ಜೆ ಕಸಿ ಮಾಡಿಸಿದ ಮಕ್ಕಳಿಗೆ ಗುರುಮಹಾಂತ ಶ್ರೀಗಳು ಸೈಕಲ್‌ಗಳನ್ನು ವಿತರಿಸಿದರು. ಡಾ.ಪವನ ದರಕ, ವೈದ್ಯ ಡಾ. ರವಿ ಜೋಶಿ, ಅಭಿಷೇಕ ದರಕ, ಕಾರ್ಯದರ್ಶಿ ಯತಿರಾಜ ದರಕ ಇದ್ದರು.
ಇಳಕಲ್ಲ: ಥಲಸ್ಸೆಮಿಯಾ ರೋಗವುಳ್ಳ ಮಕ್ಕಳಿಗೆ ಉಚಿತ ಶಸ ಚಿಕಿತ್ಸೆ ಮಾಡುವ ಮೂಲಕ ಆ ಮಕ್ಕಳನ್ನು ರೋಗ ಮುಕ್ತ ಮಾಡುತ್ತಿರುವ ಡಾ. ಪವನ ದರಕ ಅವರ ಕಾರ್ಯ ಶ್ಲಾಘನೀಯ ಎಂದು ಇಳಕಲ್ಲ ಗುರುಮಹಾಂತ ಶ್ರೀಗಳು ಹೇಳಿದರು.
ಇಲ್ಲಿನ ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ರಾಮಾನುಜಾಚಾರ್ಯ ಫೌಂಡೇಶನ್ ಹಾಗೂ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಥಲಸ್ಸೆಮಿಯಾ ದಿನಾಚರಣೆ ಹಾಗೂ ಥಲಸ್ಸ್ಸೆಮಿಯಾ ರೋಗ ನಿವಾರಣೆಗಾಗಿ ಅಸ್ತಿಮಜ್ಜೆ ಕಸಿ ಮಾಡಿಸಿದ ಮಕ್ಕಳಿಗೆ ಸೈಕಲ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಥಲಸ್ಸೆಮಿಯಾ ರೋಗದಿಂದ ಬಳಲುತ್ತಿದ್ದ 6 ಮಕ್ಕಳಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಜೊತೆಗೆೆ ಆ ಮಕ್ಕಳಿಗೆ ಬೈಸಿಕಲ್ ವಿತರಿಸಿರುವುದು ಒಳ್ಳೆಯ ಕಾರ್ಯ. ಇಂತಹ ಭಯಾನಕ ರೋಗಕ್ಕೆ ಉಚಿತ ಶಸ ಚಿಕಿತ್ಸೆ ಮಾಡುತ್ತಿರುವ ಹಾಗೂ ದೇಶದ ಸೈನಿಕರ ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯ ವೈದ್ಯ ಡಾ. ಪವನ ದರಕ ಮಾತನಾಡಿ, ಕಳೆದ 15 ವರ್ಷಗಳಿಂದ ರಾಮಾನುಜಾಚಾರ್ಯ ೌಂಡೇಶನ್ ಥಲಸ್ಸೆಮಿಯಾದಿಂದ ಬಳಲುವ ಮಕ್ಕಳಿಗೆ 21 ದಿನಕ್ಕೊಮ್ಮೆ ರಕ್ತ ಬದಲಾಯಿಸುವ ಹಾಗೂ ಅವರಿಗೆ ಉಚಿತ ಔಷಧಗಳನ್ನು ನೀಡುತ್ತಿದ್ದೇವೆ. ಸೀಳು ತುಟಿಗಳ ಆಪರೇಷನ್ ಸಹ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ವರ್ಷಕ್ಕೆ ಒಂದು ಥಲಸ್ಸೆಮಿಯಾ ಮಕ್ಕಳಿಗೆ ಅಸ್ತಿಮಚ್ಚೆ ಕಸಿ ಮಾಡಿ ಅವರನ್ನು ಥಲಸ್ಸೆಮಿಯಾದಿಂದ ಮುಕ್ತರನ್ನಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ವೈದ್ಯ ಡಾ. ರವಿ ಜೋಶಿ ಮಾತನಾಡಿ, 6 ಮಕ್ಕಳಿಗೆ ತಲಾ 40 ಲಕ್ಷ ರೂ. ಖರ್ಚುಮಾಡಿ ಅವರನ್ನು ರೋಗಮುಕ್ತರನ್ನಾಗಿ ಮಾಡಿದ್ದೇವೆ ಎಂದರು.
ರಾಮಾನುಜಾಚಾರ್ಯ ಫೌಂಡೇಶನ್ ಅಧ್ಯಕ್ಷ ಅಭಿಷೇಕ ದರಕ, ಕಾರ್ಯದರ್ಶಿ ಯತಿರಾಜ ದರಕ ಸೇರಿ ಸಂಸ್ಥೆಯ ಸರ್ವ ಸದಸ್ಯರು ಇದ್ದರು.
"
ಹತ್ತಿರ ಸಂಬಂಧಿಗಳನ್ನು ಮದುವೆಯಾಗುವುದ್ದರಿಂದ ಥಲಸ್ಸೆಮಿಯಾ ರೋಗವು ಬರುತ್ತಿದ್ದು, ಹತ್ತಿರ ಸಂಬಂಧಿಗಳನ್ನು ಮದುವೆಯಾಗಬೇಡಿ. -ಗುರುಮಹಾಂತ ಶ್ರೀಗಳು