ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಲೋಕಾರ್ಪಣೆ ಸಮಾರಂಭದಲ್ಲಿ ಶಿವಾನಂದ ಭಾರತಿ ಮಹಾಸ್ವಾಮಿಗಳು, ಶಿವಕುಮಾರ ಮಹಾಸ್ವಾಮಿಗಳು, ಡಾ. ನಿರುಪಾದೇಶ್ವರ ಮಹಾಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ಸಹಜಾನಂದ ಮಹಾಸ್ವಾಮಿಗಳು, ಚಿದ್ವಾನಂದ ಮಹಾಸ್ವಾಮಿಗಳು, ನಿಜಗುಣ ದೇವರು, ರಾಜಯೋಗಿನಿ ಅಂಬಿಕಾ ಅಕ್ಕನವರು, ಚಂದ್ರಶೇಖರ ಮಹಾಸ್ವಾಮಿಗಳು ಹಾಗೂ ಜ್ಞಾನಮಯಾನಂದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.