ರಬಕವಿ ಗುರುದೇವ ಬ್ರಹ್ಮಾನಂದ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುದೇವ ಸಿದ್ಧೇಶ್ವರ ಶ್ರೀಗಳ 20ನೇ ಪುಣ್ಯಾರಾಧನೆ ಮಹೋತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಿಕ್ಷಕರಾದ ಆರ್.ಎಂ ಅಚನೂರ, ಯು.ಜೆ. ಖಟಾವಕರ, ಎಸ್.ವಿ. ದಳವಿ, ವಿ.ಜೆ. ಕೋಪರ್ಡೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗುರುಸಿದ್ಧೇಶ್ವರ ಶ್ರೀ ಹೇಳಿಕೆ
ಗುರುದೇವ ಸಿದ್ಧೇಶ್ವರ ಶ್ರೀಗಳ ಪುಣ್ಯಾರಾಧನೆ ಮಹೋತ್ಸವ
ಸಿದ್ಧೇಶ್ವರ ಶ್ರೀಗಳ ಆಶೀರ್ವಾದದಿಂದ ಇಂದು ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ರಬಕವಿ/ಬನಹಟ್ಟಿ; ಸುಭದ್ರ ದೇಶದ ಅಭಿವೃದ್ಧಿಗೆ ಶಿಕ್ಷಣದ ಅವಶ್ಯಕತೆ ಇದ್ದು, ಅದನ್ನರಿತ ಲಿಂಗೈಕ್ಯ ಗುರುದೇವ ಸಿದ್ಧೇಶ್ವರ ಶ್ರೀ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿ ನಮ್ಮೆಲ್ಲರನ್ನು ಬಿಟ್ಟು ಮರೆಯಾದ ಶ್ರೀಗಳ ಕೊಡುಗೆ ಅಪಾರ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಗುರುದೇವ ಸಿದ್ಧೇಶ್ವರ ಶ್ರೀಗಳ 20ನೇ ಪುಣ್ಯಾರಾಧನೆ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಗಳ ಆಶೀರ್ವಾದದಿಂದ ಸಿದ್ದೇಶ್ವರ ಶ್ರೀಗಳು ಎಂಟು ಆಶ್ರಮ, ಏಳು ಶಿಕ್ಷಣ ಸಂಸ್ಥೆಗಳು, ಎರಡು ಸೋಸೈಟಿಗಳು, ಒಂದು ಬ್ಯಾಂಕ್ ಹಾಗೂ ಹತ್ತಾರು ಎಕರೆ ಜಮೀನು ಮಾಡಿ ಸ್ವತಃ ಶ್ರಮವಹಿಸಿ ದುಡಿದು ಶ್ರೀಸಾಮಾನ್ಯರ ಏಳಿಗೆಗೆ ದುಡಿದ್ದಿದ್ದಾರೆ. ಅಲ್ಲದೆ ಹತ್ತಾರು ಸಾಮಾಜಿಕ ಧಾರ್ಮಿಕ ಸೇವೆಗಳನ್ನು ಕೈಗೊಂಡಿದ್ದಾರೆ. ಅವರ ಸ್ಮರಣೆ ನಮಗೆಲ್ಲ ಇಂದು ಪುಣ್ಯದ ಕಾಲ ಎಂದರು.
ಶಾಲಾ ಮುಖ್ಯ ಗುರು ಆರ್.ಎಂ. ಅಚನೂರ ಮಾತನಾಡಿ, ಗುರುದೇವ ಸಿದ್ಧೇಶ್ವರ ಶ್ರೀಗಳ ಆಶೀರ್ವಾದದಿಂದ ಇಂದು ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನೇಕ ಶಿಕ್ಷಕರು ಸಹ ಬದುಕು ಸಾಗಿಸುತ್ತಿದ್ದಾರೆ ಎಂದರು.