ಪಟ್ಟಣದ ಗುಲಾಬ ಚಿತ್ರ ಮಂದಿರದಿಂದ ಶಿವಾಜಿ ಮೂರ್ತಿಯೊಂದಿಗೆ ಪ್ರಾರಂಭವಾದ ಬೈಕ್ ರ‍್ಯಾಲಿ, ಪಟ್ಟಣದ ಪವಾರ ಕ್ರಾಸ್, ಪುರಸಭೆ, ಸರಾಫ್ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಅರಳಿಕಟ್ಟಿ, ಗುಗ್ಗರಿಪೇಟೆ, ಯಾನಮನಶೆಟ್ಟಿ ಅಂಗಡಿ, ಮರಡಿಮಠ, ಸಾಲೇಶ್ವರ ದೇವಸ್ಥಾನ, ಪಾದನಕಟ್ಟಿ ಕ್ರಾಸ್, ಹರದೊಳ್ಳಿ, ಶಕ್ತಿಟಾಕೀಜ ಮೂಲಕ. ಕಮತಗಿ ಕ್ರಾಸ್‌ಗೆ ಬಂದು ತಲುಪಿ ಮುಕ್ತಾಯಗೊಂಡಿತು. ರ‍್ಯಾಲಿಯಲ್ಲಿ ಐದು ನೂರಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ಯುವಕರು ಭಾವಹಿಸಿದ್ದರು. ಬೈಕ್‌ಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು, ಶಿವಾಜಿ ಮಹಾರಾಜರ ಜಯ ಘೋಷಣೆಯೊಂದಿಗೆ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.