ಬಸವಾದಿ ಶರಣರ ಕಾಲದಲ್ಲಿ ವಚನ ಸಾಹಿತ್ಯ ಮತ್ತು ಸಾಮಾಜಿಕ ಕ್ರಾಂತಿಗೆ ಶಿವಶರಣ ಹಡಪದ ಅಪ್ಪಣ್ಣನವರ ಕೊಡುಗೆ ಅಪಾರ.
12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಮಹಾತ್ಮ ಬಸವಣ್ಣನವರ ಅಂತರಂಗದ ಅನುಚರರಾಗಿ, ಅವರ ತತ್ವ- ಸಿದ್ಧಾಂತಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಸಮಾಜಮುಖಿಯಾಗಿ ಬಾಳಿದವರು.
ಇಳಕಲ್ಲ : ಬಸವಾದಿ ಶರಣರ ಕಾಲದಲ್ಲಿ ವಚನ ಸಾಹಿತ್ಯ ಮತ್ತು ಸಾಮಾಜಿಕ ಕ್ರಾಂತಿಗೆ ಶಿವಶರಣ ಹಡಪದ ಅಪ್ಪಣ್ಣನವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.
ನಗರದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯೋತ್ಸವ ಅಂಗವಾಗಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಮಹಾತ್ಮ ಬಸವಣ್ಣನವರ ಅಂತರಂಗದ ಅನುಚರರಾಗಿ, ಅವರ ತತ್ವ- ಸಿದ್ಧಾಂತಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಸಮಾಜಮುಖಿಯಾಗಿ ಬಾಳಿದವರು. ಅವರ ವಿಚಾರ ಹಾಗೂ ಆದರ್ಶಗಳು ಇಂದಿನ ಸಮಾಜಕ್ಕೆ ಸದಾ ದಾರಿದೀಪವಾಗಿವೆ ಎಂದರು.
ಹಡಪದ ಅಪ್ಪಣ್ಣ ಸಮಾಜದ ಗೌರವಾಧ್ಯಕ್ಷ ಶಿವಣ್ಣ ಮಾಗಿ, ಅಧ್ಯಕ್ಷ ಶಿವಶಂಕರ ಚಿನ್ನಾಪೂರ, ಸದಸ್ಯರಾದ ಅಪ್ಪಣ್ಣ ಹಡಪದ, ಮಲ್ಲಪ್ಪ ಹಡಪದ, ಮಂಜುನಾಥ ಗಜೇಂದ್ರಗಡ, ಮಲ್ಲಿಕಾರ್ಜುನ ಚಿನ್ನಾಪೂರ, ಅರವಿಂದ ಲಿಂಗಸಗೂರು ಮತ್ತು ಸಮಾಜದ ಹಿರಿಯರು, ಮುಖಂಡರು, ಯುವಕರು, ಸಿಬ್ಬಂದಿ ಉಪಸ್ಥಿತರಿದ್ದರು.