ಬಾದಾಮಿ ನಗರದಲ್ಲಿ ಸಹಕಾರಿ ಧುರೀಣ ಕುಮಾರಗೌಡ ಜನಾಲಿ ಅವರ 56ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಂ.ಕೆ. ಪಟ್ಟಣಶೆಟ್ಟಿ , ಶಾಂತಗೌಡ ಪಾಟೀಲ, ನಾಗರಾಜ ಕಾಚಟ್ಟಿ ಇತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧ್ಯಕ್ಷ ಎಂ.ಕೆ. ಪಟ್ಟಣಶೆಟ್ಟಿ ಹೇಳಿಕೆ
ರೈತರಿಗೆ ಉತ್ತಮ ಸೇವೆ
ಜನರ ಸೇವೆ ಮಾಡಲು ಯಾವೆಲ್ಲ ಅವಕಾಶಗಳಿವೆ
ಬಾದಾಮಿ : ಸಹಕಾರಿ ಧುರೀಣರಾದ ಕುಮಾರಗೌಡ ಜನಾಲಿ ಅವರು ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ತಾಲೂಕಿನ ಪಿಕೆಪಿಎಸ್ ಮತ್ತು ರೈತಾಪಿ ವರ್ಗದವರಿಗೆ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮಾಜಿ ಶಾಸಕ, ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಮಾರಗೌಡ ಜನಾಲಿ ಅವರ 56ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಸಹಕಾರಿ ಕ್ಷೇತ್ರದ ಮೂಲಕ ಜನರ ಸೇವೆ ಮಾಡಲು ಯಾವೆಲ್ಲ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಸ್ವಾರ್ಥವಿಲ್ಲದೆ ಸೇವೆ ಮಾಡಿದ್ದಾರೆ ಎಂದರು.
ಕುಮಾರಗೌಡ ಜನಾಲಿ ಮಾತನಾಡಿ, ಜನರ ಆಶಿರ್ವಾದಿಂದ ಎರಡು ಬಾರಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕನಾಗಿ ಸಾಧ್ಯವಾದಷ್ಟು ತಾಲೂಕಿನ ಪಿಕೆಪಿಎಸ್‌ಗಳಿಗೆ ಮತ್ತು ರೈತಾಪಿ ಬಾಂಧವರಿಗೆ ನೆರವು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಂಡಲ ಅಧ್ಯಕ್ಷ ನಾಗರಾಜ ಕಾಚಟ್ಟಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಎಂ.ಬಿ. ಹಂಗರಗಿ, ಪಿ.ಆರ್. ಗೌಡರ, ಹೊನ್ನಯ್ಯ ಹಿರೇಮಠ, ಶಿವನಗೌಡ ಸುಂಕದ ಇದ್ದರು.