ಆರ್‌ಎಸ್‌ಎಸ್‌ನಿಂದ ನಿಸ್ವಾರ್ಥ ಸೇವೆ

ತುಳಸಿಗೇರಿಯಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯಪುರ ವಿಭಾಗ ಸಹಕಾರ್ಯವಾಹ ಪ್ರಕಾಶ ಕಟ್ಟಿಮನಿ ಮಾತನಾಡಿದರು. ತುಳಸಿಗೇರಿ ಪೂರ್ಣಾನಂದ ಮಠದ ಪ.ಪೂ. ಶ್ರೀ ರಾಮಾನಂದ ಸ್ವಾಮೀಜಿ, ತೋರಣಗಟ್ಟಿಯ ಪ.ಪೂ. ಶ್ರೀ ರಾಮೇಶ್ವರ ಮಹಾಸ್ವಾಮಿಗಳು, ವೆಂಕಟಾಪುರದ ಮಾತೋಶ್ರೀ ಜಾನಾಬಾಯಿ ಅಮ್ಮನವರು ಇದ್ದರು.
ತುಳಸಿಗೇರಿಯಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯಪುರ ವಿಭಾಗ ಸಹಕಾರ್ಯವಾಹ ಪ್ರಕಾಶ ಕಟ್ಟಿಮನಿ ಮಾತನಾಡಿದರು. ತುಳಸಿಗೇರಿ ಪೂರ್ಣಾನಂದ ಮಠದ ಪ.ಪೂ. ಶ್ರೀ ರಾಮಾನಂದ ಸ್ವಾಮೀಜಿ, ತೋರಣಗಟ್ಟಿಯ ಪ.ಪೂ. ಶ್ರೀ ರಾಮೇಶ್ವರ ಮಹಾಸ್ವಾಮಿಗಳು, ವೆಂಕಟಾಪುರದ ಮಾತೋಶ್ರೀ ಜಾನಾಬಾಯಿ ಅಮ್ಮನವರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕಾಶ ಕಟ್ಟಿಮನಿ ಅಭಿಮತ
  • ಹಿಂದೂ ಸಮ್ಮೇಳನ
  • ಶೋಭಾಯಾತ್ರೆ
ಕಲಾದಗಿ: ರಾಷ್ಟ್ರ ಧರ್ಮದ ಸಂರಕ್ಷಣೆಗಾಗಿ ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಆರ್‌ಎಸ್‌ಎಸ್ ಶತಮಾನೋತ್ಸವ ಹಿನ್ನೆಲೆ ಹಿಂದೂ ಧರ್ಮ, ಸಮಾಜದ ಏಕತೆ, ರಕ್ಷಣೆ ಹಾಗೂ ನಾವೆಲ್ಲಾ ಒಂದು ಎನ್ನುವ ಭಾವನೆ ಜಾಗೃತಿಗಾಗಿ ಹಿಂದೂ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯಪುರ ವಿಭಾಗ ಸಹಕಾರ್ಯವಾಹ ಪ್ರಕಾಶ ಕಟ್ಟಿಮನಿ ಹೇಳಿದರು.
ತುಳಸಿಗೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ಜಾತಿಜಾತಿಗಳ ಭೇದಭಾವ ತೊಲಗಿಸಿ ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎನ್ನುವ ಸಂಕಲ್ಪದೊಂದಿಗೆ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಮನವಿಮಾಡಿದರು.
ಸಂಘದ ಶತಾಬ್ದಿ ವರ್ಷದ ಹಿನ್ನೆಲೆ ಪಂಚ ಪರಿವರ್ತನೆಗಳಾದ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಭೋದನಂದ, ಸ್ವದೇಶಿ ಜೀವನ ಪದ್ಧತಿ, ನಾಗರಿಕ ಕರ್ತವ್ಯ ಪ್ರಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಸದೃಢಗೊಳಿಸೋಣ ಎಂದರು.
ತುಳಸಿಗೇರಿ ಪೂರ್ಣಾನಂದ ಮಠದ ಪ.ಪೂ. ಶ್ರೀರಾಮಾನಂದ ಸ್ವಾಮೀಜಿ, ತೋರಣಗಟ್ಟಿಯ ಪ.ಪೂ. ಶ್ರೀ ರಾಮೇಶ್ವರ ಮಹಾಸ್ವಾಮಿಗಳು, ವೆಂಕಟಾಪುರದ ಮಾತೋಶ್ರೀ ಜಾನಾಬಾಯಿ ಅಮ್ಮನವರು ಹಾಗೂ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಲಕ್ಷ್ಮಣ ಶಿರಬೂರ ಇದ್ದರು.
ಶೋಭಾ ಯಾತ್ರೆ
ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ ಗ್ರಾಮದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮಾರುತೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆ ಗಮನ ಸೆಳೆಯಿತು. ಗ್ರಾಮದ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ, ಕೇಸರಿ ಬಂಟಿಂಗ್ಸ್ ಹಾಗೂ ಭಗವಾ ಧ್ವಜಗಳ ಮೂಲಕ ಅಲಂಕೃತಗೊಂಡಿದ್ದ ಬೀದಿಗಳಲ್ಲಿ ಸಂಚರಿಸಿ ವಿವಿಧ ಮಂಗಳವಾದ್ಯಗಳೊಂದಿಗೆ ಎತ್ತಿನ ಗಾಡಿಗಳ ಮೂಲಕ ಮಹಾಪುರುಷರ ಭಾವಚಿತ್ರಗಳ ಮೆರವಣಿಗೆ ನಡೆಯಿತು. ಮೆರವಣಿಗೆಯದ್ದಕ್ಕೂ ನೂರಾರು ಮಹಿಳೆಯರು ಕುಂಭ ಆರತಿ ಹಿಡಿದು ಸಾಗಿದರೆ, ಪುರುಷರು ತಾಳ ವಾದ್ಯಗಳೊಂದಿಗೆ ಪಾಂಡುರಂಗ ವಿಠ್ಠಲ ಭಜನೆ ಮಾಡುವ ಮೂಲಕ ಶೋಭಾಯತ್ರೆಯ ಮೆರಗು ಹೆಚ್ಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net