ಬಾಲ್ಯಾವಸ್ಥೆಯಲ್ಲಿಯೇ ಸಂಸ್ಕಾರ ಅವಶ್ಯ

ರಬಕವಿ-ಬನಹಟ್ಟಿಯ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ  ಜೈನ ಮುನಿ ಆಚಾರ್ಯ 108 ಕುಲರತ್ನಭೂಷಣ ಮಹಾರಾಜರು ಚಿಕ್ಕ ಮಕ್ಕಳಿಗೆ ಸಂಸ್ಕಾರ ಮಂತ್ರ ಭೋದನೆ ಮಾಡಿದರು. 108 ಸ್ವಭಾವ ಸಾಗರ ಮಹಾರಾಜರು, ಶಾಂತಿಸಾಗರ ಮಹಾರಾಜರು, ಭೂಷಣಮತಿ ಮಾತಾ, ಚಾರಿತ್ರೃಭೂಷಣಮತಿ ಮಾತಾಜಿ ಇದ್ದರು.
ರಬಕವಿ-ಬನಹಟ್ಟಿಯ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಜೈನ ಮುನಿ ಆಚಾರ್ಯ 108 ಕುಲರತ್ನಭೂಷಣ ಮಹಾರಾಜರು ಚಿಕ್ಕ ಮಕ್ಕಳಿಗೆ ಸಂಸ್ಕಾರ ಮಂತ್ರ ಭೋದನೆ ಮಾಡಿದರು. 108 ಸ್ವಭಾವ ಸಾಗರ ಮಹಾರಾಜರು, ಶಾಂತಿಸಾಗರ ಮಹಾರಾಜರು, ಭೂಷಣಮತಿ ಮಾತಾ, ಚಾರಿತ್ರೃಭೂಷಣಮತಿ ಮಾತಾಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲರತ್ನಭೂಷಣ ಮಹಾರಾಜರು ಅಭಿಮತ
  • ಚಿಕ್ಕ ಮಕ್ಕಳಿಗೆ ಸಂಸ್ಕಾರ ಮಂತ್ರ ಬೋಧನೆ
  • ಇಂದು ಅನೇಕರು ಧರ್ಮಾಚರಣೆಯಲ್ಲಿ ತೊಡಗದೆ ಮೋಬೈಲ್ ಗೀಳಿಗೆ ಬಿದ್ದು ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ
ರಬಕವಿ-ಬನಹಟ್ಟಿ: ಮಕ್ಕಳು ಜನಿಸಿದ ಬಳಿಕ ಶ್ರವಣದಲ್ಲಿ ಮಂತ್ರಗಳ ಮೂಲಕ ಸಂಸ್ಕಾರ ನೀಡುವುದು ಅತ್ಯವಶ್ಯವಾಗಿದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ 108 ಕುಲರತ್ನಭೂಷಣ ಮಹಾರಾಜರು ಹೇಳಿದರು.
ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಮಂಗಳವಾರ ಚಿಕ್ಕಮಕ್ಕಳಿಗೆ ಸಂಸ್ಕಾರ ಮಂತ್ರ ಬೋಧನೆ ಮಾಡಿ ಮಾತನಾಡಿದ ಅವರು, ಮಕ್ಕಳಿಗೆ ಸಂಪೂರ್ಣ ಭಾರತೀಯ ಸಂಪ್ರದಾಯ ನೀಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕುವ ಹಾಗೆ ಜೈನ ಧರ್ಮದಲ್ಲಿ ಮಂತ್ರ ಬೋಧಿಸುವುದು ಆದಿ ಕಾಲದಿಂದಲೂ ಜಾರಿಯಲ್ಲಿದೆ. ಆದರೆ ಇಂದು ಅನೇಕರು ಧರ್ಮಾಚರಣೆಯಲ್ಲಿ ತೊಡಗದೆ ಮೋಬೈಲ್ ಗೀಳಿಗೆ ಬಿದ್ದು ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಾಯಿ ಗರ್ಭದಲ್ಲಿಯೇ ಮಕ್ಕಳಿಗೆ ಸಂಸ್ಕಾರ ನೀಡುವ ಮಂತ್ರೋಪದೇಶ ಇಂದಿನ ಪೀಳಿಗೆಗೆ ಮಾಡುತ್ತಿದ್ದೇವೆ. ಇದರಿಂದ ಇಂದಿನ ಮಕ್ಕಳೇ ನಾಳೆ ದೇಶಕ್ಕೆ ಮಾದರಿ ವ್ಯಕ್ತಿಯಾಗಬಲ್ಲರು ಎಂದು ತಿಳಿಸಿದರು.
ಮಹಾರಾಷ್ಟ್ರದ ಮುನಿ 108 ಸ್ವಭಾವ ಸಾಗರ ಮಹಾರಾಜರು ಮಾತನಾಡಿ, ತಂದೆ-ತಾಯಿಗಳ ಸೇವೆ ಮಾಡದೆ ಇರುವವರು, ಪುಣ್ಯ ಕ್ಷೇತ್ರಕ್ಕೆ ಹೋಗಿ ಪೂಜೆ ಸಲ್ಲಿಸಿದರೂ ಅದು ವ್ಯರ್ಥ್ಯ. ಆದ್ದರಿಂದ ಅವರನ್ನು ಆರಾಧಿಸುವುದರಿಂದ ಸ್ವರ್ಗವೇ ಧರೆಗಿಳಿದು ಬರುತ್ತದೆ. ನಾವು ಈಗ ಮಕ್ಕಳಿಗೆ ಸಂಸ್ಕಾರ ಕೊಡುವ ಉದ್ದೇಶವೂ ಕೂಡ ಇದಾಗಿದೆ. ವದ್ಧ ತಂದೆ-ತಾಯಿಗಳನ್ನು ವದ್ಧಾಶ್ರಮಕ್ಕೆ ಕಳಿಸದೇ ಸೇವೆ ಮಾಡಲಿ ಎಂದು ವಿವರಿಸಿದರು.
ಎಷ್ಟೇ ಸೇವೆ ಮಾಡಿದರು ವದ್ಧ ತಂದೆ ತಾಯಿಗಳು ನಮ್ಮನ್ನು ವಿರೋಧಿಸಿ ಶಾಪ ಹಾಕುತ್ತಾರಲ್ಲ ಏಕೆ ಎಂದು ಭಕ್ತರೊಬ್ಬರು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಮುನಿಗಳು, ನೀವು ಚಿಕ್ಕವರಿದ್ದಾಗ ಅನೇಕ ಪ್ರಶ್ನೇ ಕೇಳಿದರೂ, ತಪ್ಪು ಮಾಡಿದರೂ, ಸಹಿಸಿಕೊಂಡು ನಿಮ್ಮನ್ನು ಈ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈಗ ಅವರು ಕೂಡ ನೀವು ಚಿಕ್ಕವರಿದ್ದಾಗ ಮಾಡಿದ್ದನ್ನೇ ಈಗ ಮಾಡುತ್ತಿದ್ದಾರೆಂದರೆ ನೀವು ಈಗ ಸಹಿಸಿಕೊಂಡು ಸೇವೆ ಮಾಡಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ವಿವರಿಸಿದರು.
ಶಾಂತಿಸಾಗರ ಮಹಾರಾಜರು, ಭೂಷಣಮತಿ ಮಾತಾ, ಚಾರಿತ್ರೃಭೂಷಣಮತಿ ಮಾತಾಜಿ ಇದ್ದರು. ಮಹಾರಾಷ್ಟ್ರ ಹಾಗೂ ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಆಗಮಿಸಿ ಮುನಿಗಳ ಆಶಿರ್ವಾದ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net