ರಜಾಕ ನದಾಫ್‌ ಗೆ ಸಮೀರವಾಡಿ ದತ್ತಿ ಪ್ರಶಸ್ತಿ

ರಜಾಕ ನದಾಫ್‌
ರಜಾಕ ನದಾಫ್‌
Published on

ಪ್ರಮುಖ ಮುಖ್ಯಾಂಶಗಳು

  • ಬಡವರ ಕಣ್ಣಿರಿಗೆ ಕೊನೆಯಿಲ್ಲವೇ' ನಾಟಕ ಕೃತಿ
  • ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಕಲಾದಗಿ: ಗ್ರಾಮದ ಪ್ರತಿಭಾವಂತ ಕವಿ, ನಾಟಕಕಾರ, ಚಿತ್ರ ಕಲಾವಿದ ರಜಾಕ ನದಾಫ್‌ಅವರು ಬರೆದಿರುವ `ಬಡವರ ಕಣ್ಣಿರಿಗೆ ಕೊನೆಯಿಲ್ಲವೇ' ನಾಟಕ ಕೃತಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರತಿ ವರ್ಷ ಕೊಡಮಾಡುವ `ಸಮೀರವಾಡಿ ದತ್ತಿ ಪ್ರಶಸ್ತಿ' ಲಭ್ಯವಾಗಿದೆ.
ಮೂಲತಃ ಪ್ರತಿಭಾವಂತ ಚಿತ್ರ ಕಲಾವಿದರಾಗಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದ್ದಾರೆ.
ಮೇ 24ರಂದು ಮುಧೋಳದಲ್ಲಿ ಖ್ಯಾತ ವೈದ್ಯ ಸಾಹಿತಿ ಡಾ. ಶಿವಾನಂದ ಕುಬಸದ ಅವರ ತೋಟದ ಮನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀಯುತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net