ದ್ವಜಾರೋಹಣ: ಸೋಮವಾರ ಬೆಳಗ್ಗೆ 10.30 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿತು. ನಂತರ ವಿವಿಧ ಸಂಗೀತ ವಾದ್ಯಗಳ ಮೂಲಕ ಸದಾಶಿವ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ನಂತರ ಮಹಾ ದಾಸೋಹ ಸೇವೆ, ಪುಷ್ಪಾಲಂಕಾರ ಸೇವೆ ನಡೆಯಿತು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಪಂಪಣ್ಣ ಕಾಚೆಟ್ಟಿ, ಡಾ. ಆರ್.ಸಿ. ಭಂಡಾರಿ, ಮುಕ್ಕಣ್ಣ ಜನಾಲಿ, ನಿಂಗನಗೌಡ ಜನಾಲಿ, ಮಾನಗೌಡ ಜನಾಲಿ, ಇಷ್ಟಲಿಂಗ ಶಿರಶಿ, ಬಿ.ವಿ. ಭಂಡಾರಿ ಇದ್ದರು.