ವಾರ ಕಳೆದರೂ ಪೂರ್ಣಗೊಳ್ಳದ ರಸ್ತೆ ದುರಸ್ತಿ

ಗುಳೇದಗುಡ್ಡದ ಮುರುಡಿ ಓಣಿಯಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ದುರಸ್ತಿ ಕಾಮಗಾರಿ.
ಗುಳೇದಗುಡ್ಡದ ಮುರುಡಿ ಓಣಿಯಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ದುರಸ್ತಿ ಕಾಮಗಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ಆಕ್ರೋಶ
  • ವಾಹನ ಸವಾರರು, ಪಾದಚಾರಿಗಳಿಗೆ ಪರದಾಟ
  • ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವವರು ಆತಂಕಪಡುವಂತಾಗಿದೆ.
ಗುಳೇದಗುಡ್ಡ :

ಪಟ್ಟಣದ ಮುರುಡಿ ಓಣಿಯಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಪುರಸಭೆ ರಸ್ತೆ ಅಗೆದು ವಾರ ಕಳೆದರೂ ದುರಸ್ತಿ ಕಾಮಗಾರಿ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವವರು ಆತಂಕಪಡುವಂತಾಗಿದೆ.

ಮುರುಡಿ ಓಣಿಯ ರಸ್ತೆ ಸರಾ ಬಜಾರ ಹಾಗೂ ಬನ್ನಿಕಟ್ಟಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ಪ್ರತಿದಿನ ನೂರಾರು ಜನರು ಸಂಚರಿಸುತ್ತಾರೆ. ಇದೇ ರಸ್ತೆಯಲ್ಲಿ ವೆಂಕಟೇಶ ಪ್ರಾಥಮಿಕ ಶಾಲೆ ಇರುವುದರಿಂದ ಶಾಲಾ ಮಕ್ಕಳು ನಿತ್ಯ ಇದೇ ಮಾರ್ಗ ಬಳಸುತ್ತಾರೆ. ಭಾರತ್ ಮಾರುಕಟ್ಟೆ, ಪುರಸಭೆ, ಗ್ರಾಮಚಾವಡಿ, ಅಂಚೆ ಕಚೇರಿ ಹಾಗೂ ಬಸ್ ನಿಲ್ದಾಣಗಳಿಗೆ ತೆರಳುವವರಿಗೂ ಈ ರಸ್ತೆ ಪ್ರಮುಖ ಸಂಪರ್ಕವಾಗಿದೆ.

ಕೆಲ ತಿಂಗಳ ಹಿಂದೆ ಕೈಗೊಂಡ ೆರ್ಸ್‌ ಕಾಮಗಾರಿ ಸಮರ್ಪಕವಾಗಿರದ ಪರಿಣಾಮ ಮಳೆ ಹಾಗೂ ಪುರಸಭೆಯ ಕುಡಿಯುವ ನೀರು ಪೂರೈಕೆ ಸಂದರ್ಭದಲ್ಲಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು.
ನಿವಾಸಿಗಳ ನಿರಂತರ ದೂರಿನ ಬಳಿಕ ಪುರಸಭೆ ಇತ್ತೀಚೆಗೆ ರಸ್ತೆಯನ್ನು ಅಗೆದು ಸಮತಟ್ಟು ಮಾಡುವ ಕೆಲಸ ಆರಂಭಿಸಿದೆ. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಬಾಕಿ ಉಳಿದಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ರಸ್ತೆಯಲ್ಲಿ ಉಂಟಾಗಿರುವ ಅಗೆತ ಹಾಗೂ ಅಸಮತಟ್ಟಾದ ಭಾಗದಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ವಿಶೇಷವಾಗಿ ರಾತ್ರಿ ವೇಳೆ ಅಪಾಯದ ಸಾಧ್ಯತೆ ಹೆಚ್ಚಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ, ಬಾಕಿ ಉಳಿದಿರುವ ರಸ್ತೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net