ಬಾಗಲಕೋಟೆ: ಕಾವೇರಿ ನದಿಯಂತೆ ಬಾಗಲಕೋಟೆ- ವಿಜಯಪುರ ಅವಳಿ ಜಿಲ್ಲೆಗಳ ಕೃಷ್ಣಾ, ಭೀಮಾ, ಘಟಪ್ರಭ, ಮಲಪ್ರಭ ಮತ್ತು ಡೋಣಿ ನದಿಗಳು ಕೂಡ ಕೈಗಾರಿಕೆಗಳಿಂದ ಬರುತ್ತಿರುವ ತ್ಯಾಜ್ಯ ಮತ್ತು ಗೃಹ ಬಳಕೆ ತ್ಯಾಜ್ಯಗಳಿಂದ ಮಲಿನವಾಗುತ್ತಿವೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ತೀವ್ರ ಆತಂಕ ವ್ಯಕ್ತಪಡಿಸಿದರು.