ಧಾರ್ಮಿಕ ಚಟುವಟಿಕೆಗಳು ಸಮಾಜದ ಸಮದ್ಧಿಗೆ ದಾರಿ

ಬಾದಾಮಿ ಪಟ್ಟಣದ ನವಗಹ ಹಿರೇಮಠದಲ್ಲಿ ಅಧಿಕ ಮಾಸದ ಅಂಗವಾಗಿ ಆಯೋಜಿಸಿದ್ದ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮದಲ್ಲಿ ನರಗುಂದ ಪತ್ರಿವನ ಮಠದ ಡಾ. ಸಿದ್ದವೀರ ಶಿವಾಯೋಗಿ ಶಿವಾಚಾರ್ಯರು ಮಾತನಾಡಿದರು. ಮಠದ ಪೀಠಾಧಿಪತಿ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿ, ನರಸಾಪುರದ ಮರುಳಸಿದ್ಧ ಶಿವಾಚಾರ್ಯರು, ಹೊನ್ನಮ್ಮ ಹಿರೇಮಠ, ಮಾಜಿ ಜಿ.ಪಂ. ಸದಸ್ಯ ಹನಮಂತ ಮಾವಿನಮರದ, ಬಿ.ಪಿ.ಹಳ್ಳೂರ, ಮಾಜಿ ಪುರಸಭೆ ಸದಸ್ಯೆ ಶಕುಂತಲಾ ನಾಯ್ಕರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ. ಸಿದ್ದವೀರ ಶಿವಾಯೋಗಿ ಶಿವಾಚಾರ್ಯರು ಹೇಳಿಕೆ
  • ಅಧಿಕ ಮಾಸದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ
  • 101 ಸೈನಿಕ ದಂಪತಿಗಳಿಗೆ ಸೈನಿಕ ರತ್ನ ಪ್ರಶಸ್ತಿ ಗೌರವಿಸಲಾಯಿತು.
ಬಾದಾಮಿ: ಪಟ್ಟಣದ ನವಗಹ ಹಿರೇಮಠದಲ್ಲಿ ಅಧಿಕ ಮಾಸದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಭಕ್ತಿ ಭಾವದಿಂದ ಆಯೋಜಿಸಲಾಯಿತು.
ಮಠದ ಪೀಠಾಧಿಪತಿ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳ ನೇತತ್ವದಲ್ಲಿ 8ನೇ ವರ್ಷದ ಮೌನ ಅನುಷ್ಟಾನ, ಗುಡ್ಡಾಪೂರ ದಾನಮ್ಮದೇವಿ ಪುರಾಣ ಮಹಾಮಂಗಲ, ಅಯ್ಯಚಾರ, ಲಿಂಗದೀಕ್ಷೆ ಸೇರಿ ಹಲವು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಿತು.
ಸಮಾಜಮುಖಿ ಚಟುವಟಿಕೆಗಳ ಭಾಗವಾಗಿ 101 ಸೈನಿಕ ದಂಪತಿಗಳಿಗೆ ಸೈನಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪಂಚ ತುಲಾಭಾರ, ವಿಭೂತಿ-ಪ್ರಸಾದ ವಿತರಣೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕೂಡ ಜರುಗಿತು.
ಮೌನಮಂಗಳವನ್ನು ನರಸಾಪುರದ ಮರುಳಸಿದ್ಧ ಶಿವಾಚಾರ್ಯರು ನೆರವೇರಿಸಿದರು. ನರಗುಂದ ಪತ್ರಿವನ ಮಠದ ಡಾ. ಸಿದ್ದವೀರ ಶಿವಾಯೋಗಿ ಶಿವಾಚಾರ್ಯರು ಮಾತನಾಡಿ, ಅಧಿಕ ಮಾಸದಲ್ಲಿ ದಾನ-ಧರ್ಮ ಮತ್ತು ಧಾರ್ಮಿಕ ಚಟುವಟಿಕೆಗಳು ಸಮಾಜದ ಶಾಂತಿ ಹಾಗೂ ಸಮದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕಿ ಹೊನ್ನಮ್ಮ ಹಿರೇಮಠ ಮಾತನಾಡಿ, ಶ್ರೀಗಳ ಮಾರ್ಗದರ್ಶನದಿಂದ ಸಾಮಾಜಿಕ ಹಾಗೂ ಆರ್ಥಿಕ ಅಭಿವದ್ಧಿಗೆ ಪ್ರೇರಣೆ ದೊರೆತಿದೆ ಎಂದು ಹೇಳಿದರು.
ಮಾಜಿ ಜಿ.ಪಂ. ಸದಸ್ಯ ಹನಮಂತ ಮಾವಿನಮರದ, ಬಿ.ಪಿ.ಹಳ್ಳೂರ, ಮಾಜಿ ಪುರಸಭೆ ಸದಸ್ಯೆ ಶಕುಂತಲಾ ನಾಯ್ಕರ, ಚನ್ನಮ್ಮ ಅಬಕ್ಕನವರ, ಚನ್ನಬಸಪ್ಪ ಅಥಣಿ, ಮುಸ್ಲಿಂ ಧರ್ಮಗುರುಗಳು, ಮುಖಂಡರು ಹಾಜರಿದ್ದರು. ಶಿಕ್ಷಕ ವಿ.ಎಸ್.ಶೆಟ್ಟರ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net