ಘಟಪ್ರಭಾ ನದಿಗೆ ತಕ್ಷಣ ನೀರು ಹರಿಸಿ

ಮುಧೋಳದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಳ ವತಿಯಿಂದ  ಘಟಪ್ರಭಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಗನಗೌಡ ಕಾತರಕಿ, ಅರುಣ ಕಾರಜೋಳ, ರವಿ ನಂದಗಾಂವ, ಶ್ರೀಶೈಲ ಚಿನ್ನಣವರ, ಸದಾಶಿವ ಇಟಕನ್ನವರ ಇತರರಿದ್ದರು.
ಮುಧೋಳದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಳ ವತಿಯಿಂದ ಘಟಪ್ರಭಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಗನಗೌಡ ಕಾತರಕಿ, ಅರುಣ ಕಾರಜೋಳ, ರವಿ ನಂದಗಾಂವ, ಶ್ರೀಶೈಲ ಚಿನ್ನಣವರ, ಸದಾಶಿವ ಇಟಕನ್ನವರ ಇತರರಿದ್ದರು.
Published on: 

ಮುಧೋಳ: ಘಟಪ್ರಭಾ ನದಿ ಹಾಗೂ ಎಡದಂಡೆ, ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಳ ವತಿಯಿಂದ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮುಖಂಡ ನಾಗಪ್ಪ ಅಂಬಿ ಮಾತನಾಡಿ, ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ನದಿಗೆ ನೀರು ಹರಿಸುತ್ತಿಲ್ಲ. ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಸುಗೂರಪ್ಪ ಅಕ್ಕಿಮರಡಿ ಮಾತನಾಡಿ, ಕಳೆದ ೨೦ ದಿನಗಳಿಂದ ನದಿ ಬತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸ್ಥಳೀಯ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಬರ ಪರಿಹಾರವಾಗಿ ಘೋಷಿಸಿರುವ ೨,೫೦೦ ರೂ. ಬದಲಿಗೆ ಪ್ರತಿ ಎಕರೆಗೆ ೫೦ ಸಾವಿರ ರೂ. ಪರಿಹಾರ ನೀಡಬೇಕು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಮಹಾಲಿಂಗಪ್ಪ ತೇಲಿ ಮಾತನಾಡಿ, ಜಲಾಶಯದಲ್ಲಿ ೪೮ ಟಿಎಂಸಿಗೂ ಅಽಕ ನೀರಿದ್ದರೂ ನದಿಗೆ ನೀರು ಹರಿಸದಿರುವುದು ಸರಿಯಲ್ಲ. ಆದೇಶ ತಿದ್ದುಪಡಿ ಮಾಡಿ ತಕ್ಷಣ ನೀರು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶ್ರೀಶೈಲಗೌಡ ಪಾಟೀಲ ಮಾತನಾಡಿ, ಬರದಿಂದ ರೈತರು ಸಂಕಷ್ಟದಲ್ಲಿದ್ದು, ನದಿಗೆ ನೀರು ಹರಿಸುವುದರ ಜತೆಗೆ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಒತ್ತಾಯಿಸಿದರು.

ಲೋಕಣ್ಣ ಕತ್ತಿ, ಪ್ರತಾಪ ಚಂದನಶಿವ, ರವಿ ಲಕ್ಷಾಣಿ ಮಾತನಾಡಿದರು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗನಗೌಡ ಕಾತರಕಿ, ಅರುಣ ಕಾರಜೋಳ, ರವಿ ನಂದಗಾಂವ, ಶ್ರೀಶೈಲ ಚಿನ್ನಣವರ, ಸದಾಶಿವ ಇಟಕನ್ನವರ ಸೇರಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net