ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಲಿ

ಹುನಗುಂದದ ವಿ.ಎಂ.ಕೆ.ಎಸ್.ಆರ್. ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪ್ರಾಚಾರ್ಯ ಡಾ. ಎಸ್.ಆರ್. ಗೋಲಗೊಂಡ ಮಾತನಾಡಿದರು. ಪಕ್ಕದಲ್ಲಿ ಪ್ರೊ. ಎಸ್.ಬಿ. ಚಳಗೇರಿ ಹಾಗೂ ಡಾ. ಎಸ್.ಆರ್. ನಾಗಣ್ಣವರ ಇತರರಿದ್ದರು. ಉಪಸ್ಥಿತರಿದ್ದರು.
ಹುನಗುಂದದ ವಿ.ಎಂ.ಕೆ.ಎಸ್.ಆರ್. ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪ್ರಾಚಾರ್ಯ ಡಾ. ಎಸ್.ಆರ್. ಗೋಲಗೊಂಡ ಮಾತನಾಡಿದರು. ಪಕ್ಕದಲ್ಲಿ ಪ್ರೊ. ಎಸ್.ಬಿ. ಚಳಗೇರಿ ಹಾಗೂ ಡಾ. ಎಸ್.ಆರ್. ನಾಗಣ್ಣವರ ಇತರರಿದ್ದರು. ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಎಸ್.ಆರ್. ಗೋಲಗೊಂಡ ಹೇಳಿಕೆ
  • ಪ್ಲಾಸ್ಟಿಕ್ ಬಳಕೆ ಮತ್ತು ಕೈಗಾರಿಕಾ ಅಭಿವದ್ಧಿಯಿಂದ ಪರಿಸರಕ್ಕೆ ಗಂಭೀರ ಹಾನಿಯಾಗುತ್ತಿದೆ
  • ಗಾಳಿ, ನೀರು, ಮಣ್ಣು, ಮರಗಳು ಹಾಗೂ ಪ್ರಾಣಿ-ಪಕ್ಷಿಗಳು ಪರಿಸರದ ಅವಿಭಾಜ್ಯ ಅಂಗ
ಹುನಗುಂದ: ಗಾಳಿ, ನೀರು, ಮಣ್ಣು, ಮರಗಳು ಹಾಗೂ ಪ್ರಾಣಿ-ಪಕ್ಷಿಗಳು ಪರಿಸರದ ಅವಿಭಾಜ್ಯ ಅಂಗಗಳಾಗಿದ್ದು, ಇತ್ತೀಚಿನ ಅರಣ್ಯ ನಾಶ, ಮಾಲಿನ್ಯ, ಪ್ಲಾಸ್ಟಿಕ್ ಬಳಕೆ ಮತ್ತು ಕೈಗಾರಿಕಾ ಅಭಿವದ್ಧಿಯಿಂದ ಪರಿಸರಕ್ಕೆ ಗಂಭೀರ ಹಾನಿಯಾಗುತ್ತಿದೆ ಎಂದು ಪ್ರಾಚಾರ್ಯ ಡಾ. ಎಸ್.ಆರ್. ಗೋಲಗೊಂಡ ಹೇಳಿದರು.
ನಗರದ ವಿ.ಎಂ.ಕೆ.ಎಸ್.ಆರ್. ವಸ್ತ್ರದ ಕಲಾ-ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಮತ್ತು ನೀರಿನ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮರ ನೆಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಹಾಗೂ ನೀರು-ವಿದ್ಯುತ್ ವ್ಯರ್ಥವನ್ನು ತಡೆಯುವುದು ಅಗತ್ಯವೆಂದರು. ವಿದ್ಯಾರ್ಥಿಗಳು ಪರಿಸರ ಜಾಗತಿಯಲ್ಲಿ ಪ್ರಮುಖ ಪಾತ್ರವಹಿಸಬೇಕೆಂದು ಕರೆ ನೀಡಿದರು.
ಕ್ರೀಡಾ ನಿರ್ದೇಶಕ ಪ್ರೊ. ಎಸ್.ಬಿ. ಚಳಗೇರಿ ಮಾತನಾಡಿ, ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ವಿಶ್ವದ ಮಟ್ಟದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಡಾ. ಎಸ್.ಆರ್. ನಾಗಣ್ಣವರ, ಐಕ್ಯೂಎಸಿ ಸಂಚಾಲಕ ಡಾ. ಎಲ್.ಎನ್. ಕುಲಕರ್ಣಿ, ಡಾ. ತಿಪ್ಪೇಸ್ವಾಮಿ ಡಿ.ಎಸ್. ಉಪಸ್ಥಿತರಿದ್ದರು. ವಾಹಿದ್ ಕಡಿವಾಲ ನಿರೂಪಿಸಿದರು. ಸ್ವಯಂಸೇವಕ ಅಭಿಷೇಕ ಹುನಸಿಗಿಡದ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net