ಪ್ರಸ್ತುತ ಬ್ಯಾರೇಜ್‌ಗೆ ಪ್ರತಿದಿನ ಸುಮಾರು 500 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಎಲ್ಲ 22 ಗೇಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸಂಗ್ರಹಿತ ನೀರು ಬೇಸಿಗೆ ದಿನಗಳಲ್ಲಿ ಉಪಯುಕ್ತವಾಗಬೇಕಾದರೆ ಹಿನ್ನೀರಿನ ವ್ಯಾಪ್ತಿಯಲ್ಲಿರುವ ಗ್ರಾಮ ಹಾಗೂ ಪಟ್ಟಣಗಳ ಜನರು ಈಗಿನಿಂದಲೇ ನೀರನ್ನು ಮಿತವಾಗಿ ಬಳಸಬೇಕಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ನಿರ್ಲಕ್ಷೃ ವಹಿಸಿದರೆ ಬೇಸಿಗೆಯ ಮಧ್ಯಂತರದಲ್ಲಿ ನೀರಿನ ತೀವ್ರ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.