ಜ್ಞಾನ ಸಂಪಾದನೆಗೆ ದಿನಪತ್ರಿಕೆ ಓದುವುದು ಅತ್ಯವಶ್ಯ

ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯಲ್ಲಿ ಪತ್ರಿಕಾ ದಿನಾಚರಣೆ ವಿಶೇಷವಾಗಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಮುಖ್ಯಶಿಕ್ಷಕ ಆರ್.ವಿ. ಜಾಧವ ಮಾತನಾಡಿದರು. ಪತ್ರಕರ್ತರಾದ ಚಂದ್ರಶೇಖರ ಹಡಪದ, ಸಿಖಂದರ ಬಾವಾಖಾನ, ಮೆಹಬೂಬ ನದಾಫ್, ನಿತೀಶ ಪಾಟೀಲ, ಪತ್ರಿಕಾ ವಿತರಕ ಬಸಪ್ಪ ಪಾಣಿಶೆಟ್ಟಿ ಇತರರಿದ್ದರು.
ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯಲ್ಲಿ ಪತ್ರಿಕಾ ದಿನಾಚರಣೆ ವಿಶೇಷವಾಗಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಮುಖ್ಯಶಿಕ್ಷಕ ಆರ್.ವಿ. ಜಾಧವ ಮಾತನಾಡಿದರು. ಪತ್ರಕರ್ತರಾದ ಚಂದ್ರಶೇಖರ ಹಡಪದ, ಸಿಖಂದರ ಬಾವಾಖಾನ, ಮೆಹಬೂಬ ನದಾಫ್, ನಿತೀಶ ಪಾಟೀಲ, ಪತ್ರಿಕಾ ವಿತರಕ ಬಸಪ್ಪ ಪಾಣಿಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಆರ್.ವಿ. ಜಾಧವ ಹೇಳಿಕೆ
  • ಪತ್ರಿಕಾ ದಿನಾಚರಣೆ ಆಚರಣೆ
ಕಲಾದಗಿ: ವಿದ್ಯಾರ್ಥಿ ಜೀವನದಲ್ಲಿ ಹೆಚ್ಚಿನ ಜ್ಞಾನ ಸಂಪಾದನೆಗಾಗಿ ದಿನಪತ್ರಿಕೆಗಳನ್ನು ಓದುವುದು ಅತ್ಯವಶ್ಯ, ಪ್ರತಿನಿತ್ಯ ಮನೆಗೊಂದು ದಿನಪತ್ರಿಕೆ ತರಿಸಿಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದು ಬರುವ ದಿನಗಳಲ್ಲಿ ನಿಮ್ಮನ್ನು ಯಶಸ್ವಿನತ್ತ ಕೊಂಡೊಯುತ್ತದೆ ಎಂದು ಮುಖ್ಯಶಿಕ್ಷಕ ಆರ್.ವಿ.ಜಾಧವ ಹೇಳಿದರು.
ಗ್ರಾಮದ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ತ ನಡೆದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪತ್ರಿಕೆಗಳಲ್ಲಿ ಬರುವ ಮಾಹಿತಿಗಳು ಅತ್ಯಂತ ಉಪಯುಕ್ತವಾಗಿದ್ದು. ಮೊಬೈಲ್ ಗೀಳು ಬಿಟ್ಟು ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಿ ಎಂದರು.
ಹಿರಿಯ ಪತ್ರಕರ್ತ ದ.ರಾ. ಪುರೋಹಿತ ಮಾತನಾಡಿ, ಪತ್ರಿಕೆಗಳ ಇತಿಹಾಸ, ಮಹತ್ವ ಹಾಗೂ ಬ್ರಿಟಿಷ ಕಾಲದಲ್ಲಿ 20 ವರ್ಷಗಳ ಕಾಲ ಜಿಲ್ಲಾ ಕೇಂದ್ರವಾಗಿದ್ದ ಸಂದರ್ಭದಲ್ಲಿ ಕಲ್ಲಚ್ಚಿನ ಮೂಲಕ ಕಲಾದಗಿಯಲ್ಲಿ ಮುದ್ರಣವಾಗುತ್ತಿದ್ದ `ಹಿತೇಚ್ಚು ಮತ್ತು ರತ್ನಾಕರ' ಪತ್ರಿಕೆಗಳ ನಂಟಿನ ಬಗ್ಗೆ ವಿವರವಾಗಿ ತಿಳಿಸಿದರು.
ಶ್ರೀಕಾಂತ ಕೆರಕಲ್‌ಮಟ್ಟಿ ಮಾತನಾಡಿ, ದಿನಬೆಳಗಾದರೆ ಪತ್ರಿಕೆಗಳನ್ನು ಓದುವ ಮುಖಾಂತರ ನಮ್ಮ ದಿನಚರಿ ಪ್ರಾರಂಭವಾಗಬೇಕು. ಜಗದಗಲದ ಸುದ್ದಿ ಸಮಾಚಾರಗಳನ್ನು ಓದಿ ಅದನ್ನು ತಿಳಿದುಕೊಳ್ಳುವ ಹಂಬಲ ನಮ್ಮಲ್ಲಿರಬೇಕು ಎಂದು ಹೇಳಿದರು.
ಪರ್ತಕರ್ತರ ದಿನಾಚರಣೆಯ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ತಂಡಗಳಿಗೆ `ವಿಜಯವಾಣಿ' ಸೇರಿ ಇನ್ನಿತರ ರಾಜ್ಯಮಟ್ಟದ ಪತ್ತಿಕೆಗಳ ಹೆಸರನ್ನು ಇಟ್ಟಿದ್ದು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪತ್ರಕರ್ತರನ್ನೆ ಆಹ್ವಾನಿಸಿ ಮಕ್ಕಳಿಗೆ ದಿನಪತ್ರಿಕೆಯ ಮಹತ್ವವನ್ನು ಹೇಳಿಸಿದ್ದು ವಿಶೇಷವಾಗಿತ್ತು.
ಪತ್ರಕರ್ತರಾದ ಚಂದ್ರಶೇಖರ ಹಡಪದ, ಸಿಖಂದರ ಬಾವಾಖಾನ, ಮೆಹಬೂಬ ನದಾಫ್, ನಿತೀಶ ಪಾಟೀಲ, ಪತ್ರಿಕಾ ವಿತರಕ ಬಸಪ್ಪ ಪಾಣಿಶೆಟ್ಟಿ ವೇದಿಕೆಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net