ಅಕ್ಟೋಬರ್‌ನಲ್ಲಿ ರಂಭಾಪುರಿ ಶ್ರೀಗಳ ದಸರಾ ದರ್ಬಾರ್

 ಜಮಖಂಡಿ ನಗರದ ಕಲ್ಯಾಣ ಮಠದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ವಿಶ್ವಪ್ರಭುದೇವ ಶಿವಾಚಾರ್ಯರು, ಗೌರಿಶಂಕರ ಶಿವಾಚಾರ್ಯರು, ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಓಲೆಮಠದ ಆನಂದ ದೇವರು ಇತರರಿದ್ದರು.
ಜಮಖಂಡಿ ನಗರದ ಕಲ್ಯಾಣ ಮಠದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ವಿಶ್ವಪ್ರಭುದೇವ ಶಿವಾಚಾರ್ಯರು, ಗೌರಿಶಂಕರ ಶಿವಾಚಾರ್ಯರು, ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಓಲೆಮಠದ ಆನಂದ ದೇವರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾಹಿತಿ
  • 10 ದಿನಗಳ ಉತ್ಸವಕ್ಕೆ ಭಾರೀ ಸಿದ್ಧತೆ
ಜಮಖಂಡಿ: ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ದಸರಾ ದರ್ಬಾರ್ ಉತ್ಸವವನ್ನು ಅಕ್ಟೋಬರ್ 11ರಿಂದ 20ರವರೆಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಕಲ್ಯಾಣ ಮಠದಲ್ಲಿ ಏರ್ಪಡಿಸಿದ್ದ ಉತ್ಸವದ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಮಟ್ಟದ ವೈಭವದಲ್ಲಿ ಈ ಐತಿಹಾಸಿಕ ಉತ್ಸವ ನಡೆಯಲಿದ್ದು, ಸರ್ವ ಸಮಾಜದವರು ಒಂದಾಗಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ರಾಜ್ಯದ ಹಲವು ನಗರಗಳಿಂದ ಬಂದ ಬೇಡಿಕೆಗಳ ನಡುವೆಯೂ ಜಮಖಂಡಿಯಲ್ಲಿ ಉತ್ಸವಕ್ಕೆ ಶ್ರೀಗಳು ಒಪ್ಪಿಗೆ ನೀಡಿರುವುದು ವಿಶೇಷವಾಗಿದೆ ಎಂದರು.
ಉತ್ಸವದ ಅಂಗವಾಗಿ ಕೃಷಿ ಮೇಳ, ಆರೋಗ್ಯ ಶಿಬಿರಗಳು, ಇಷ್ಟಲಿಂಗ ಪೂಜೆ, ಲಿಂಗದೀಕ್ಷೆ ಸೇರಿ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ನೂರಾರು ಮಠಗಳ ಸ್ವಾಮೀಜಿಗಳು, ಪಂಚಪೀಠಾಧೀಶರು ಹಾಗೂ ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಈ ಮೊದಲ ಬಾರಿಗೆ ನಡೆಯುತ್ತಿರುವ ದಸರಾ ದರ್ಬಾರ್ ರಾಜ್ಯಕ್ಕೆ ಮಾದರಿಯಾಗುವಂತೆ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ನ್ಯಾಯವಾದಿ ಎನ್.ಎಸ್. ದೇವರವರ, ಮುತ್ತಣ್ಣ ಹಿಪ್ಪರಗಿ, ಡಾ. ಎಚ್.ಜಿ. ದಡ್ಡಿ, ರಾಜು ಕಡಕೋಳ, ಚಂದ್ರು ಬಾಳೆಹಣ್ಣಿನಮಠ, ವಿರೇಶ ಕುಗಮಠ ಸೇರಿ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿ ಸಲಹೆಗಳನ್ನು ನೀಡಿದರು.
ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಓಲೆಮಠದ ಆನಂದ ದೇವರು, ಬನಹಟ್ಟಿಯ ಶರಣಬಸವ ಶ್ರೀಗಳು, ಹಿರೇಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯರು, ಶೂರ್ಪಾಲಿ ಸಾರಂಗ ಮಠದ ಸುನಂದಮ್ಮ ತಾಯಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net