ಸೆಕ್ಟರ್ ನಂ. ೨೧ ರಲ್ಲಿ ಚರಂಡಿ ಹಾಗೂ ಅಗ್ನಿಶಾಮಕ ಕಚೇರಿ ಪಕ್ಕ ಇದ್ದ ಬಸ್ ನಿಲುಗಡೆ ಸ್ಥಳ ವೀಕ್ಷಿಸಿ, ನಿಲ್ದಾಣವನ್ನು ನವೀಕರಣಗೊಳಿಸಬೇಕು. ಸುತ್ತಮುತ್ತ ಇರುವ ಚರಂಡಿಗಳೆಲ್ಲವನ್ನು ಸ್ಚಚ್ಛಗೊಳಿಸಬೇಕು. ಚರಂಡಿಗಳು ತುಂಬಿಕೊAಡಿದ್ದರೆ ಮಳೆ ನೀರು ಹರಿದು ರಸ್ತೆಗಳು ಹಾಳಾಗುತ್ತವೆ. ಹೀಗಾಗಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಸ್ಚಚ್ಛತೆ ಮತ್ತು ದುರಸ್ತಿ ಇದ್ದಲ್ಲಿ ಕೂಡಲೇ ಮಾಡಬೇಕು ಎಂದ ಅವರು, ಸೆಕ್ಟರ್ ನಂ. ೨೯ ಮತ್ತು ೮೫ ಮತ್ತಿತರ ಕಡೆಗೆ ತೆರಳಿ, ಅಲ್ಲಿನ ಕುಡಿವ ನೀರಿನ ಕಾಮಗಾರಿ ವೀಕ್ಷಿಸಿ, ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಿದರು.