ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ

ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಂಗಪ್ಪ ಎಂ. ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಎಸ್. ಬಾವಿಹಾಳ, ವಿವಿಧ ಎಪಿಎಂಸಿ ಕಾರ್ಯದರ್ಶಿಗಳಾದ ರವಿ ರಾಠೋಡ, ರತ್ನಾಕರ ಎ.ವೈ, ದೇವರಾಜ ಪಟ್ಟಣಶೆಟ್ಟಿ ಇದ್ದರು.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಂಗಪ್ಪ ಎಂ. ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಎಸ್. ಬಾವಿಹಾಳ, ವಿವಿಧ ಎಪಿಎಂಸಿ ಕಾರ್ಯದರ್ಶಿಗಳಾದ ರವಿ ರಾಠೋಡ, ರತ್ನಾಕರ ಎ.ವೈ, ದೇವರಾಜ ಪಟ್ಟಣಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಸಂಗಪ್ಪ ಎಂ. ಹೇಳಿಕೆ
  • ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ
ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ. ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಕ್ವಿಂಟಾಲ್‌ಗೆ 7,721-00 ರೂ.ಗಳಂತೆ ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 20 ಕ್ವಿಂಟಾಲ್‌ನಂತೆ ಖರೀದಿ ಮಾಡಲಾಗುವುದು ಎಂದರು.
ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ಜಿಲ್ಲೆಯಲ್ಲಿ ಒಟ್ಟು 17 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಂದಣಿ ಪ್ರಕ್ರಿಯೆ ಆದೇಶದ ದಿನಾಂಕದಿಂದ 50 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 60 ದಿನಗಳ ವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸೂರ್ಯಕಾಂತಿ ಗುಣಮಟ್ಟದ ಪ್ರಕಾರ ಗರಿಷ್ಠ ಮಿತಿಗಳು ಪ್ರತಿ ಕ್ವಿಂಟಲ್‌ಗೆ ಕಲ್ಮಶಗಳು (ವಿದೇಶಿ ವಸ್ತು) ಶೇ. 2ರಷ್ಟು, ಒಡೆದ ಅಥವಾ ಒಡೆದ ಬೀಜಗಳು ಶೇ. 3ರಷ್ಟು, ಹಾನಿಗೊಳಗಾದ ಮತ್ತು ಜೇರುಂಡೆ ಬೀಜಗಳು ಶೇ. 4ರಷ್ಟು ಅಪಕ್ಕ ಮತ್ತು ಕುಗ್ಗಿದ ಶೇ. 5ರಷ್ಟು ಹಾಗೂ ತೇವಾಂಶ ಶೇ. 9ರಷ್ಟು ಇರುತ್ತದೆ. ಜಿಲ್ಲೆಯ ರೈತರು ನೋಂದಣಿಗಾಗಿ ಆಧಾರ ಕಾರ್ಡ್, ಪಹಣಿ ಪತ್ರಿಕೆ, ಆಧಾರ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ಬುಕ್ ಪ್ರತಿ ಸಲ್ಲಿಸಿ ನಿಗದಿತ ಅವಽಯೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸೂರ್ಯಪಾನ ಉತ್ಪನ್ನಕ್ಕೆ ಜಿಲ್ಲಾ ವ್ಯವಸ್ಥಾಪಕರು, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಬಾಗಲಕೋಟೆ, ಸಹಾಯಕ ನಿರ್ದೇಶಕರು ಎಪಿಎಂಸಿ, ಬಾಗಲಕೋಟೆ ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಎಸ್. ಬಾವಿಹಾಳ, ವಿವಿಧ ಎಪಿಎಂಸಿ ಕಾರ್ಯದರ್ಶಿಗಳಾದ ರವಿ ರಾಠೋಡ, ರತ್ನಾಕರ ಎ.ವೈ, ದೇವರಾಜ ಪಟ್ಟಣಶೆಟ್ಟಿ, ಆರ್.ಎಂ. ದಂಡೀನ, ವಿ.ಡಿ. ಪಾಟೀಲ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅಂಗಡಿ, ಇತರರು ಉಪಸ್ಥಿತರಿದ್ದರು.

ಖರೀದಿ ಕೇಂದ್ರಗಳ ವಿವರ

ಬಾಗಲಕೋಟೆ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಖಜ್ಜಿಡೋಣಿ, ಟಿಎಪಿಸಿಎಂಎಸ್ ಬಾಗಲಕೋಟೆ, ಬಾದಾಮಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಕಗಲಗೊಂಬ, ಕೆಂದೂರ , ನಂದಿಕೇಶ್ವರ, ಪಿಕೆಪಿಎಸ್ ಕೆರೂರ, ಮುಧೋಳ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಜುನ್ನೂರ, ಬೀಳಗಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಸೊನ್ನ, ಟಿಎಪಿಸಿಎಂಎಸ್ ಬೀಳಗಿ, ಹುನಗುಂದ ತಾಲೂಕಿನ ಟಿಎಪಿಸಿಎಂಎಸ್ ಹುನಗುಂದ, ಎಫ್‌ಪಿಒ ಸೂಳೇಭಾವಿ, ಜಮಖಂಡಿ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್, ಜಮಖಂಡಿ, ಇಳಕಲ್ಲ ತಾಲೂಕಿನ ಪಿ.ಕೆ.ಪಿ.ಎಸ್, ನಂದವಾಡಗಿ, ಪಿ.ಕೆ.ಪಿ.ಎಸ್ ಕರಡಿ ಹಾಗೂ ಜಿಎಫ್‌ಪಿಸಿಎಲ್ ಇಳಕಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net