ಜೂ.೩ ರಂದು ಪುಣ್ಯ ಸ್ಮರಣೋತ್ಸವ ಹಾಗೂ ಪಟ್ಟಧಿಕಾರ ಮಹೋತ್ಸವ

ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮುಖಂಡ ಸಿದ್ದಣ್ಣ ಶಿವನಗುತ್ತಿ ಮಾತನಾಡಿದರು. ಬಾಲ್ಕಿಯ ಸಿದ್ದರಾಮೇಶ್ವರ ಸ್ವಾಮೀಜಿ, ಮಹಾಂತ ದೇವರು ಸ್ವಾಮೀಜಿ, ಶರಣಪ್ಪ ಗಂಗಲ್, ಎಂ.ಸಿ.ಗೂಗೇರಿ, ಸಿದ್ದಣ್ಣ ಶಿವನಗುತ್ತಿ, ಈರಣ್ಣ ಮಠಪತಿ, ಚೇತನ ಕತ್ತೆಕಾಯಿ ಇತರರು ಇದ್ದರು.
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮುಖಂಡ ಸಿದ್ದಣ್ಣ ಶಿವನಗುತ್ತಿ ಮಾತನಾಡಿದರು. ಬಾಲ್ಕಿಯ ಸಿದ್ದರಾಮೇಶ್ವರ ಸ್ವಾಮೀಜಿ, ಮಹಾಂತ ದೇವರು ಸ್ವಾಮೀಜಿ, ಶರಣಪ್ಪ ಗಂಗಲ್, ಎಂ.ಸಿ.ಗೂಗೇರಿ, ಸಿದ್ದಣ್ಣ ಶಿವನಗುತ್ತಿ, ಈರಣ್ಣ ಮಠಪತಿ, ಚೇತನ ಕತ್ತೆಕಾಯಿ ಇತರರು ಇದ್ದರು.
Published on
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಗುರು ಬಸವೇಶ್ವರ ಮಠದ ಕಾಯಕಯೋಗಿ ಲಿಂ.ಪೂಜ್ಯ ಶ್ರೀ ಬಸವ ಪ್ರಸಾದ ಶಿವಯೋಗಿಗಳ ೧೦ ನೇ ವರ್ಷ ಪುಣ್ಯ ಸ್ಮರಣೋತ್ಸವ ಹಾಗೂ ನಿರಂಜನ ಪಟ್ಟಾಽಕಾರ ಮಹೋತ್ಸವ ಜೂ.೩ ರಂದು ಬೆಳಗ್ಗೆ ೧೧ ಗಂಟೆಗೆ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಸಿದ್ದಣ್ಣ ಶಿವನಗುತ್ತಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೬ ಗಂಟೆಗೆ ಗುರುಬಸವ ಮಹಾಸ್ವಾಮಿಗಳ ಅವರಿಂದ ಚಿನ್ಮಯ ಅನುಗ್ರಹ, ೯ ಗಂಟೆಗೆ ಷಟಸ್ಥಲ ಧ್ವಜಾರೋಹಣ ಮಾತೋಶ್ರೀ ಮುಕ್ತಾಯ ಅಮ್ಮನವರ ನೆರವೇರಸಲಿದ್ದಾರೆ. ಬೆಳಗ್ಗೆ ೧೧ ಗಂಟೆಗೆ ಶೂನ್ಯ ಸಿಂಹಾಸನರೋಹಣ ಹಾಗೂ ಸಮಾಜ ಸೇವಾ ದೀಕ್ಷಾ ಸಮಾರಂಭ ಜರುಗಲಿದೆ. ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಹಾಗೂ ಪ್ರಭುಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ತೊ0ಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಮೂರು ಸಾವಿರ ಮಠದ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮೀಜಿ, ನಿಡಸೋಶಿ ಶಿವಲಿಂಗೇಶ್ವರ ಸ್ವಾಮೀಜಿ, ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಽÃಶರು ಭಾಗವಹಿಸಲಿದ್ದಾರೆ. ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ನರಗುಂದ, ಶಿವಪ್ಪ ಹೊರಕೇರಿ ಸೇರಿದಂತೆ ವಿವಿಧ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಾಲ್ಕಿಯ ಸಿದ್ದರಾಮೇಶ್ವರ ಸ್ವಾಮೀಜಿ, ಮಹಾಂತ ದೇವರು ಸ್ವಾಮೀಜಿ, ಶರಣಪ್ಪ ಗಂಗಲ್, ಎಂ.ಸಿ.ಗೂಗೇರಿ, ಸಿದ್ದಣ್ಣ ಶಿವನಗುತ್ತಿ, ಈರಣ್ಣ ಮಠಪತಿ, ಚೇತನ ಕತ್ತೆಕಾಯಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net