ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯ ಪ್ರಕರಣಗಳ ದೂರುದಾರರ ದೂರುಗಳನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಅಲೆದಾಡಿಸುವುದಕ್ಕಿಂತ ಸಂಧಾನ ಪ್ರಕ್ರಿಯೆಗೆ ಆದ್ಯತೆ ನೀಡುವ ಅಗತ್ಯವಿದೆ
ಚಿಮ್ಮಡ: ಸಾರ್ವಜನಿಕರು ಪ್ರಶಂಶಿಸಿ ನೀಡುವ ಗೌರವ, ಸನ್ಮಾನ ಜವಾಬ್ದಾರಿ ಹೆಚ್ಚಿಸುವುದರೊಂದಿಗೆ ಉತ್ಸಾಹ ತುಂಬುತ್ತವೆ ಎಂದು ಬನಹಟ್ಟಿ ಸಿಪಿಐ ಆರ್.ಆರ್. ಪಾಟೀಲ ಹೇಳಿದರು.
ಗ್ರಾಮದ ಬಗನಾಳ ತೋಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಕರ್ತವ್ಯದಲ್ಲಿ ಅಡೆತಡೆ, ಒತ್ತಡಗಳು ಹೆಚ್ಚು. ಅವುಗಳನ್ನು ನಿಭಾಯಿಸಿ ಸಾರ್ವಜನಿಕರ ಸೇವೆ ಮಾಡುವುದು ಸವಾಲಿನ ಕೆಲಸ. ಸಾರ್ವಜನಿಕರ ಸಹಕಾರದಿಂದ ಉತ್ತಮ ಸೇವೆ ದೊರೆಯಲಿದೆ ಎಂದರು.
ಕಾಂಗ್ರೆಸ್ ಮುಖಂಡ ರಾಜು ಬಗನಾಳ ಮಾತನಾಡಿ, ಉತ್ತಮ ಸೇವೆಗೆ ಹೆಸರಾಗಿರುವ ಪೊಲೀಸ್ ಅಧಿಕಾರಿ ಸಿಪಿಐ ಪಾಟೀಲ ಅವರಿಂದ ಈ ಭಾಗದಲ್ಲಿ ಶೋಷಿರಿಗೆ ನ್ಯಾಯ ಸಿಗುವ ವಿಸ್ವಾಸವಿದೆ ಎಂದರು.
ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯನ್ನವರ ಮಾತನಾಡಿ, ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯ ಪ್ರಕರಣಗಳ ದೂರುದಾರರ ದೂರುಗಳನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಅಲೆದಾಡಿಸುವುದಕ್ಕಿಂತ ಸಂಧಾನ ಪ್ರಕ್ರಿಯೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದರು.