ಕಮತಗಿ ಸಮೀಪದ ಶಿರೂರಿನ ನೀಲಾನಗರದ ಅಂಗನವಾಡಿ ಕೇಂದ್ರದಲ್ಲಿ ಕಿಲ್ಕಾರಿ ಸೇವೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಕಿಲ್ಕಾರಿ ಯೋಜನೆ ಪ್ರಚಾರ ಪ್ರತಿಯನ್ನು ಬಿಡುಗಡೆಗೊಳಿಸಿಲಾಯಿತು. ಆರೋಗ್ಯ ನಿರೀಕ್ಷಣಾಕಾರಿ ಕೆ.ಎ್. ಮಾಯಾಚಾರಿ, ಎಸ್.ಎಸ್. ಮೆಣಸಗಿ, ರಾಮವ್ವ ಗೌಡರ, ಅನುಷಾ ಖಂಡೊಬಾ, ಮಂಜುಳಾ ಕಟ್ಟಿಮನಿ, ಸುಮಿತ್ರಾ ಲಮಾಣಿ ಮತ್ತಿತರರಿದ್ದರು.
ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕಮತಗಿ: ಕಿಲ್ಕಾರಿ ಯೋಜನೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಚಿತ ಮೊಬೈಲ್ ಆರೋಗ್ಯ ಸೇವೆಯಾಗಿದ್ದು, ಗರ್ಭಧಾರಣೆಯ ನಾಲ್ಕನೇ ತಿಂಗಳಿಂದ ಮಗುವಿನ ಮೊದಲ ವರ್ಷದವರೆಗೆ ತಾಯಂದಿರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್. ಮಾಯಾಚಾರಿ ಹೇಳಿದರು.
ಸಮೀಪದ ಶಿರೂರಿನ ನೀಲಾನಗರ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಕಿಲ್ಕಾರಿ ಸೇವೆಯ ಕುರಿತು ಜಾಗತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಎಸ್.ಎಸ್. ಮೆಣಸಗಿ ಮಾತನಾಡಿ, ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಾಯಿಸಿದ ಗರ್ಭಿಣಿಯರ ಮೊಬೈಲ್ ಸಂಖ್ಯೆಗೆ 14423 ರಿಂದ ಡಾ. ಅನಿತಾ ಧ್ವನಿಯಲ್ಲಿ ಉಚಿತ ಆಡಿಯೋ ಸಂದೇಶಗಳ ಮೂಲಕ ಪೋಷಣೆ, ಆರೋಗ್ಯ ತಪಾಸಣೆ ಹಾಗೂ ಶಿಶು ಆರೈಕೆಯ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.