ಬ್ಯಾರಿಕೇಡ್ ತಳ್ಳಿಕೊಂಡು ನುಗ್ಗಿದ ಪ್ರತಿಭಟನಾಕಾರರು

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿಹಾಕುತ್ತಿರುವುದು.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿಹಾಕುತ್ತಿರುವುದು.
Published on
ಬಾಗಲಕೋಟೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಎತ್ತಿಕೊಂಡು ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸೋಮವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಜಿಲ್ಲಾಽಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಅಂತ್ಯಗೊAಡಿತು.
ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರತಿಭಟನಾಕಾರರನ್ನು ಪ್ರವೇಶ ದ್ವಾರದಲ್ಲಿ ಪೊಲೀಸರು ತಡೆದರು. ಕೆಲವರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಮರಳಿ ಅವರನ್ನು ಬಿಟ್ಟ ಬಳಿಕ ಮತ್ತೆ ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಮುಂದಾದರು.
ಪ್ರತಿಭಟನಾಕಾರರು ಪ್ರವೇಶ ದ್ವಾರ ದಾಟಿಕೊಂಡು ಒಳಗಡೆ ಹೋಗದಂತೆ ಬ್ಯಾರಿಕೇಡ ಹಾಕಿ, ಪೊಲೀಸ್ ಕಾವಲು ಹಾಕಿದ್ದರು. ಆದರೆ, ಯಾವುದೇ ಕಾರಣಕ್ಕೂ ಮುತ್ತಿಗೆ ಹಾಕದೇ ಬಿಡಲ್ಲ ಎಂದು ಬಿಗಿಪಟ್ಟು ಹಿಡಿದ ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳುಕೊಂಡು ನುಗ್ಗಲು ಯತ್ನಿಸಿದರು. ಈ ವೇಳೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಪ್ರವೇಶ ದ್ವಾರ ದಾಟಿಕೊಂಡು ಒಳಗಡೆ ಬರುತ್ತಿದ್ದಂತೆ ಬೆನ್ನಲ್ಲೆ ಪ್ರತಿಭಟನಾಕಾರರು ಸಹ ಬ್ಯಾರಿಕೇಡ್ ತೆಗೆದುಹಾಕಿ ನೂರಾರು ಜನರು ಒಳಗಡೆ ನುಗ್ಗಿ ಮುತ್ತಿಗೆ ಹಾಕಿದರು.
ಕೆಲವರು ಒಳಗಡೆ ಹೋದರೆ ಮತ್ತೆ ಕೆಲವರು ಹೊರಗಡೆಯೇ ಉಳಿದರು. ಅವರನ್ನು ಪೊಲೀಸರು ಬಿಡಲಿಲ್ಲ. ಆಗ ರಾಜ್ಯಸಭಾ ಸದಸ್ಯ ಅವರೆಲ್ಲರನ್ನು ಒಳಗಡೆ ಬಿಡಬೇಕು ಎಂದು ಬಿಗಿಪಟ್ಟು ಹಿಡಿದು ಮರಳಿ ಹಾಕಿದ್ದ ಬ್ಯಾರಿಕೇಡ್ ತೆಗೆಯಲು ಮುಂದಾದರು. ಆಗ ಅದಕ್ಕೆ ಅಡ್ಡಿಪಡಿಸಿದ ಪೊಲೀಸರು ಮತ್ತು ಡಿಎಸ್ಪಿ ಗಜಾನನ ಸುತಾರ ಜೊತೆ ವಾಗ್ದಾಕ್ಕೆ ಇಳಿದರು. ನಾನು ರಾಜ್ಯಸಭಾ ಸದಸ್ಯ ಇದ್ದೇನೆ. ನನ್ನ ಮುಟ್ಟಿದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಪೊಲೀಸರಿಗೆ ಆವಾಜ್ ಸಹ ಹಾಕಿದರು. ಆಗ ಎಸ್ಪಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ ಉಳಿದವರನ್ನು ಒಳಗಡೆ ಬಿಟ್ಟರು.
ಇದಕ್ಕೂ ಮುನ್ನ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸೇರಿದಂತೆ ಇತರೆ ಮುಖಂಡರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಮಾಣಿಕವಾಗಿ ಸಮರ್ಥನೆ ಮಾಡುವ ಪ್ರಾಮಾಣಿಕ ಸರ್ಕಾರ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ಲೇವಡಿ ಮಾಡಿದರು.
ವಾಲ್ಮೀಕಿ ನಿಗಮ ಹಗರಣದ ಆರೋಪಿ ಬಿ.ನಾಗೇಂದ್ರ ಅವರನ್ನು ಸಿದ್ದರಾಮಯ್ಯ ಸರ್ಕಾರ ರಾಜೀನಾಮೆ ಪಡೆದಿತ್ತು. ಅದೇ ಡಿ.ಕೆ.ಶಿವಕುಮಾರ ಸರ್ಕಾರ ಅವರಿಗೆ ಮತ್ತೆ ಮಂತ್ರಿಪಟ್ಟ ಕಟ್ಟಿದೆ. ಡಿಕೆಶಿ ಅವರು ಈ ರಾಜ್ಯವನ್ನು ಭ್ರಷ್ಟಾಚಾರ ಮತ್ತು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬೇರೆ ಬೇರೆ ರೀತಿಯ ಭ್ರಷ್ಟಾಚಾರದ ಬಗ್ಗೆ ಕೇಳಿದ್ದೇವೆ. ಆದರೆ, ರಾಜ್ಯದ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಅತ್ಯಂತ ವಿಶಿಷ್ಟವಾಗಿದೆ. ನಾನು ದಲಿತ ಎಂದು ನನ್ನ ಟಾರ್ಗೆಟ್ ಮಾಡಿದ್ದಾರೆಂದು ಹೇಳುವ ಸಚಿವ ಬಿ.ನಾಗೇಂದ್ರಗೆ ನಾಚಿಕೆ ಆಗಬೇಕು. ಸಮಾಜವನ್ನು ಪ್ರತಿನಿಽಸುವ ನೀವು ನಿಮ್ಮದೇ ಸಮಾಜದ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದಾಗ ದಲಿತರಿಗೆ ಅನ್ಯಾಯ ಮಾಡಿದ್ದು ಗೊತ್ತಾಗಲಿಲ್ಲವೆ? ಎಂದು ಪ್ರಶ್ನಿಸಿ, ನಾಗೇಂದ್ರ ಅವರನ್ನು ಸಂಪುಟದಿAದ ಕೈಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ರಾಜಶೇಖರ ಶೀಲವಂತ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಜಿಲ್ಲಾ ಮಟ್ಟದ ಪದಾಽಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net