ಶಾಸಕ ಸಿದ್ದು ಸವದಿ ಮಾತನಾಡಿ, ಈ ಹಿಂದೆ 2012-13ನೇ ಸಾಲಿನಲ್ಲಿಯೇ ದೇವರಾಜ ನಗರದ ನಿವಾಸಿಗಳಿಗೆ ಹಕ್ಕು ಪತ್ರ ಒದಗಿಸಿ ಶಾಶ್ವತ ಪರಿಹಾರ ಒದಗಿಸಲು ಮುಂದಾದೆ. ಆದರೆ, ಅದಕ್ಕೆ ತಕರಾರು ಮಾಡಿದ್ದರಿಂದ ಅಲ್ಲಿಗೆ ನಿಂತಿತು. ಈಗಲೂ ನಿಮ್ಮ ಬೇಡಿಕೆ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುವುದು. ಕಂದಾಯ ಸಚಿವರಿಗೆ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಡುವ ಭರವಸೆ ನೀಡಿದರು.