ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಗುಳೇದಗುಡ್ಡದ ತಾಯಮ್ಮ ನಗರದಲ್ಲಿ ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪುರಸಭೆ ಎದುರು ತಂಬಿಗೆ ಹಿಡಿದು ಪ್ರತಿಭಟಿಸಿದರು. ಸಿ.ಐ. ತೆಗ್ಗಿನಮನಿ, ಎಂ.ಎಸ್. ಕೊಣ್ಣೂರ, ರವಿ ಗದಗಿನ, ಸಂಗಪ್ಪ ತಿಪ್ಪಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಾಯಮ್ಮ ನಗರವಾಸಿಗಳಿಂದ
  • ತಂಬಿಗೆ ಹಿಡಿದು ಪ್ರತಿಭಟನೆ
ಗುಳೇದಗುಡ್ಡ: ಪಟ್ಟಣದ ವಾರ್ಡ್ ನಂ. 6 ತಾಯಮ್ಮ ನಗರದಲ್ಲಿ ಒಳಚರಂಡಿ ಅವ್ಯವಸ್ಥೆಯಿದ್ದು ಅದನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಪುರಸಭೆ ಎದುರು ತಂಬಿಗೆ ಹಿಡಿದು ಪ್ರತಿಭಟನೆ ಮಾಡಿದರು.
ತಾಯಮ್ಮ ನಗರದಲ್ಲಿ ಮೊದಲ ಹಂತದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಒಳಚರಂಡಿ ಸಮಸ್ಯೆಯಿಂದ ಇಲ್ಲಿನ ಜನರು ಬಯಲು ಶೌಚಾಲಯಕ್ಕೆ ಹೋಗುವಂತಾಗಿದೆ. ರಾತ್ರಿ ವೇಳೆ ಶೌಚಾಲಯಕ್ಕೆ ಹೋಗಲು ಹುಳು, ಹುಪ್ಪಡಿಗಳಿಂದ ಭಯ ಬೀಳುವಂತಾಗಿದೆ. ಆದ್ದರಿಂದ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ನಿವಾಸಿಗಳಿಗೆ ಅನುಕೂಲಮಾಡಿಕೊಡುವಂತೆ ಅಲ್ಲಿನ ನಿವಾಸಿಗಳಾದ ಸಿ.ಐ. ತೆಗ್ಗಿನಮನಿ, ಎಂ.ಎಸ್. ಕೊಣ್ಣೂರ, ರವಿ ಗದಗಿನ, ಸಂಗಪ್ಪ ತಿಪ್ಪಾ, ಟಿ.ವೈ. ನಿಡಗುಂದಿ ಮತ್ತಿತರರು ಆಗ್ರಹಿಸಿದರು. ಮುಖ್ಯಾಧಿಕಾರಿ ಅಸ್ಲಂ ಮುಜಾವರ ಅವರಿಗೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net