ಮಲ್ಲಿಕಾರ್ಜುನ ದೇಗುಲ ಮೂರ್ತಿಗಳ ಮೆರವಣಿಗೆ

ಬಾಗಲಕೋಟೆ ನಗರದಲ್ಲಿ ಶುಕ್ರವಾರ ಮಲ್ಲಾಪುರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಸಾಕ್ಷಿ ಗಣಪತಿ ಬ್ಯಾಳಿ ಬಸವಣ್ಣ ಮೂರ್ತಿಗಳ ಮೆರವಣಿಗೆಯಲ್ಲಿ ಮಹಿಳೆಯರು ಕುಂಭಹೊತ್ತು ಸಾಗಿದರು.
ಬಾಗಲಕೋಟೆ ನಗರದಲ್ಲಿ ಶುಕ್ರವಾರ ಮಲ್ಲಾಪುರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಸಾಕ್ಷಿ ಗಣಪತಿ ಬ್ಯಾಳಿ ಬಸವಣ್ಣ ಮೂರ್ತಿಗಳ ಮೆರವಣಿಗೆಯಲ್ಲಿ ಮಹಿಳೆಯರು ಕುಂಭಹೊತ್ತು ಸಾಗಿದರು.
Published on

ಮಲ್ಲಾಪುರದ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ದಾರ ಕಮಿಟಿ, ಹಾಗೂ ಸದ್ಭಕ್ತರ ಸಹಕಾರದೊಂದಿಗೆ ಆಯೋಜಿಸಿರುವ ಸಾಕ್ಷಿ ಗಣಪತಿ, ಬೃಹತ್ ಬ್ಯಾಳಿ ಬಸವಣ್ಣ ಹಾಗೂ ದೊಡ್ಡ ನಂದಿಯ ಶಿಲಾಮೂರ್ತಿಗಳ ಮೆರವಣಿಗೆ ಮತ್ತು ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶುಕ್ರವಾರ ನೂತನ ಮೂರ್ತಿಗಳ ಮೆರವಣಿಗೆ ಹಾಗೂ ಮಹಿಳೆಯರಿಂದ ಕುಂಭಮೇಳ ಶ್ರದ್ಧಾ-ಭಕ್ತಿಯಿಂದ ಜರುಗಿತು.

ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಸಾಕ್ಷಿ ಗಣಪತಿ ಹಾಗೂ ಬೃಹತ್ ಬ್ಯಾಳಿ ಬಸವಣ್ಣನ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು. ವಿವಿಧ ಕಲಾ ತಂಡಗಳು, ಭಜನಾ ತಂಡಗಳು ಹಾಗೂ ಕಲಾವಿದರು ಪಾಲ್ಗೊಂಡು ಉತ್ಸವಕ್ಕೆ ಮೆರುಗು ತಂದರು. ಮಹಿಳೆಯರು ಕುಂಭಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು.
ಚರಂತಿಮಠದ ಪ್ರಭುಸ್ವಾಮಿಗಳು, ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮೇರವಣಿಗೆಗೆ ಚಾಲನೆ ನೀಡಿದರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸೇರಿದಂತೆ ದೇಗುಲದ ಭಕ್ತರು ಭಾಗವಹಿಸಿದ್ದರು.
ಆಗಸ್ಟ್ ೧೭ರಂದು ಪ್ರತಿಷ್ಠಾಪನೆ:
ಬಾಗಲಕೋಟೆಯ ಹಳೆ ಮಲ್ಲಾಪುರದ ಗುಡ್ಡದ ಮಲ್ಲಯ್ಯನ ದೇವಸ್ಥಾನದಲ್ಲಿ ಆಗಸ್ಟ್ ೧೭ ಎಂದು ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net