ಕ್ರೀಡಾ ದಿನಾಚರಣೆ ಅಂಗವಾಗಿ ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾಽಕಾರಿ ಸಂಗಪ್ಪ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಽಕಾರಿ ಸಂಗಪ್ಪ ಅವರು ಸಲಹೆ ನೀಡಿದರು.
ರಾಷ್ಟಿçÃಯ ಕ್ರೀಡಾ ದಿನಾಚರಣೆ ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ದಿನಾಚರಣೆ ಎಂದರೆ ಕೇವಲ ಓಟ, ಪದಕ, ಟ್ರೋಫಿ ಹಾಗೂ ಬಹುಮಾನಗಳ ದಿನವಲ್ಲ. ಆರೋಗ್ಯಕರ ದೇಹ, ಏಕಾಗ್ರ ಮನಸ್ಸು ಮತ್ತು ದೃಢವಾದ ಮನೋಭಾವ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ನೆನಪಿಸುವ ವಿಶೇಷ ದಿನವಾಗಿದೆ ಎಂದರು.
ಕ್ರೀಡೆ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಯ ಮೂಲಕ ಶಿಸ್ತು, ತಂಡದ ಸಹಕಾರ, ತಾಳ್ಮೆ, ನಾಯಕತ್ವ, ದೃಢನಿಶ್ಚಯ ಹಾಗೂ ಸೋಲಿನ ನಂತರ ಮತ್ತೆ ಎದ್ದು ನಿಲ್ಲುವ ಧೈರ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಗೆಲುವು ಮಾತ್ರ ಕ್ರೀಡೆಯ ಅಂತಿಮ ಗುರಿಯಲ್ಲ. ಭಾಗವಹಿಸುವಿಕೆ, ಪ್ರಾಮಾಣಿಕ ಪ್ರಯತ್ನ, ಕ್ರೀಡಾ ಮನೋಭಾವ ಹಾಗೂ ಅತ್ಯುತ್ತಮ ಪ್ರದರ್ಶನವೂ ಅಷ್ಟೇ ಮಹತ್ವದ್ದಾಗಿದೆ. ಫಲಿತಾಂಶವನ್ನು ಯಾವಾಗಲೂ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ, ನಮ್ಮ ಪ್ರಯತ್ನವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂಬುದನ್ನು ಕ್ರೀಡೆ ನಮಗೆ ಕಲಿಸುತ್ತದೆ ಎಂದು ಹೇಳಿದರು.
ನಿಯಮಿತ ಕ್ರೀಡಾಭ್ಯಾಸದಿಂದ ದೈಹಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದರು.
ಪ್ರಾರAಭದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಕ್ರೀಡಾ ಧ್ವಜಾರೋಹಣ, ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ದೈಹಿಕ ಶಿಕ್ಷಣಾಽಕಾರಿ ಆರ್.ಆರ್.ಪಾಟೀಲ, ಸೈಕ್ಲಿಂಗ್ ತರಬೇತಿಗಾರ್ತಿ ಅನಿತಾ ನಿಂಬರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.