ಎನ್.ಬಿ. ಗಲಗಲಿ, ಬಿ.ಎ. ಗೌಡರ, ವಿ.ಡಿ. ಗಂಗಾವತಿ ಅವರು ಮಾತನಾಡಿ, ಮುದ್ರಣ ಕ್ಷೇತ್ರವು ಸುವರ್ಣ ಕ್ಷೇತ್ರವಾಗಿದೆ ಮುದ್ರಣಕ್ಕೆ ವಾಕ್ ಸ್ವಾತಂತ್ರೃವಿದೆ. ಈ ಕ್ಷೇತ್ರ ಗಟ್ಟಿತನದಿಂದ ಕೂಡಿದೆ ಮುದ್ರಣವು ಸಾಕಷ್ಟು ಸಾಧನೆಯನ್ನು ಮಾಡಿದೆ. ಇಲ್ಲಿ ಹಲವಾರು ಮುದ್ರಣಗಳು ಬರುತ್ತವೆ. ಮೊದಲು ಅಚ್ಚು ಮುದ್ರಣ, ಆಫ್‌ಸೆಟ್ ಮುದ್ರಣ, ಸ್ಕ್ರೀನ್‌ಪ್ರಿಂಟ್, ಡಿಜಿಟಲ್ ಪ್ರಿಂಟ್‌ಗಳಿವೆ. ಇವುಗಳಲ್ಲಿ ಅಚ್ಚು ಮುದ್ರಣ ಹಾಗೂ ಸ್ಕ್ರೀನ್ ಪ್ರಿಂಟ್ ಮರೆಮಾಚಿವೆ. ಆಫ್‌ಸೆಟ್‌ಪ್ರಿಂಟ್ ಮತ್ತು ಡಿಜಿಟಲ್ ಪ್ರಿಂಟ್ ಉಳಿದಿದೆ ಎಂದರು.