ಟನ್ ಕಬ್ಬಿಗೆ 3,312 ರೂ. ದರ ನಿಗದಿ

ಜಮಖಂಡಿ ತಾಲೂಕಿನ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಎಂಆರ್‌ಎನ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಶಂಕರ ಕಿತ್ತೂರ, ಶಂಕರಗೌಡ ಪಾಟೀಲ, ಆನಂದ ಕಂಪೂ, ಭೀಮಪ್ಪ ಹಿಪ್ಪರಗಿ, ಮಲ್ಲನಗೌಡ ಪಾಟೀಲ, ರಾಮನಗೌಡ ಪಾಟೀಲ, ಮೀರಾಸಾಬ ಗದ್ಯಾಳ ಇತರರಿದ್ದರು.
ಜಮಖಂಡಿ ತಾಲೂಕಿನ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಎಂಆರ್‌ಎನ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಶಂಕರ ಕಿತ್ತೂರ, ಶಂಕರಗೌಡ ಪಾಟೀಲ, ಆನಂದ ಕಂಪೂ, ಭೀಮಪ್ಪ ಹಿಪ್ಪರಗಿ, ಮಲ್ಲನಗೌಡ ಪಾಟೀಲ, ರಾಮನಗೌಡ ಪಾಟೀಲ, ಮೀರಾಸಾಬ ಗದ್ಯಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ
  • ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ರೈತರೊಂದಿಗೆ ಸಭೆ
  • ಕಾರ್ಖಾನೆಯೂ ಉಳಿಯೇಕು
ಜಮಖಂಡಿ: ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿಗೆ ಟನ್ ಕಬ್ಬಿಗೆ 3,312 ರೂ. ದರ ನೀಡುವಂತೆ ನಿರ್ಣಯಿಸಿದ ರೈತರ ಬೇಡಿಕೆಯಂತೆ ದರ ನೀಡಲಾಗುವುದು ಎಂದು ಎಂಆರ್‌ಎನ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮಾಜಿ ಸಚಿವ ಮುರುಗೇಶ ನಿರಾಣಿ ಒಪ್ಪಿಗೆ ಸೂಚಿಸಿದರು.
ತಾಲೂಕಿನ ಮೈಗೂರ ಹಿಪ್ಪರಗಿ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಕಾರ್ಖಾನೆಯೂ ಉಳಿಯಬೇಕು ರೈತರೂ ಬೆಳೆಯಬೇಕು. ಆ ನಿಟ್ಟಿನಲ್ಲಿ ಸೂಕ್ತ ದರಗಳನ್ನು ನೀಡುತ್ತಾ ಬಂದಿದ್ದೇವೆ. ರೈತರ ಹಿತಾಸಕ್ತಿ ಕಾಪಾಡುವುದು ನಮ್ಮ ಮೂಲ ಧ್ಯೇಯ. ಟನ್ ಕಬ್ಬಿಗೆ 3212+100 ಒಟ್ಟು 3,312 ರೂ. ದರ ಘೊಷಣೆ ಮಾಡಿದ್ದು, ಇದು ಬಾಗಲಕೋಟೆ ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಬೆಲೆಯಾಗಿದೆ ಎಂದರು.
ಈ ಹಿಂದೆ ಎಲ್ಲ ಕಾರ್ಖಾನೆಯವರು ಟನ್ ಕಬ್ಬಿಗೆ 2,900 ರೂ ಘೊಷಣೆ ಮಾಡಿದ್ದರು. ಅವರಂತೆ ನಾವೂ ಅಷ್ಟೇ ಕೊಡಬಹುದಾಗಿತ್ತು. ಆದರೆ ರೈತರ ಹಿತ ಮತ್ತು ಅವರು ಸಂಕಷ್ಟಗಳಲ್ಲಿ ಇರಬಾರದು ಎನ್ನುವ ಕಾರಣಕ್ಕೆ 3 ಸಾವಿರ ರೂ. ದರ ನೀಡುವುದರ ಮೂಲಕ 100 ರೂ. ವನ್ನು ಹೆಚ್ಚಿಗೆ ನೀಡಿದ್ದೆವು ಎಂದು ನೆನಪಿಸಿಕೊಂಡರಲ್ಲದೇ, ನಮ್ಮ ರೈತರು ಆರ್ಥಿಕವಾಗಿ ಬೆಳೆಯಬೇಕು. ಆದರೆ ಕಾರ್ಖಾನೆಯೂ ಉಳಿಯೇಕು. ಆ ನಿಟ್ಟಿನಲ್ಲಿ ರೈತರು ತೆಗೆದುಕೊಂಡ ನಿರ್ಣಯವನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ರೈತರೇ ದರವನ್ನು ನಿಗದಿಪಡಿಸುತ್ತಾ ಬಂದಿದ್ದಾರೆ. ಅದರಂತೆ ನಡೆದುಕೊಂಡು ಕಾರ್ಖಾನೆ ಬಂದಿದೆ. ‘ನಮ್ಮ ಕಬ್ಬು ನಮ್ಮ ಕಾರ್ಖಾನೆ ನಮ್ಮದೇ ಬೆಲೆ’ ಎಂಬಂತೆ ಬಂದಿದ್ದೇವೆ. ಇದು ರಾಜ್ಯದಲ್ಲಿ ರೈತರು ಕಾರ್ಖಾನೆಯ ಸೌಹಾರ್ದದ ಪ್ರತಿಕವಾಗಿದೆ ಎಂದರು.
ಮುಖಂಡರಾದ ಪುಂಡಲಿಕ ಪಾಲಬಾವಿ, ಸೋಮನಾಥಗೌಡ ಪಾಟಿಲ, ಈಶ್ವರ ಕರಬಸನ್ನವರ, ಮಹಾವೀರ ಪಾಟೀಲ, ಲಕ್ಷ್ಮಣ ಸವದಿ, ಭೀಮಶಿ ಮಗದುಮ್ ಮಾತನಾಡಿದರು.
ಶಂಕರ ಕಿತ್ತೂರ, ಶಂಕರಗೌಡ ಪಾಟೀಲ, ಆನಂದ ಕಂಪೂ, ಭೀಮಪ್ಪ ಹಿಪ್ಪರಗಿ, ಮಲ್ಲನಗೌಡ ಪಾಟೀಲ, ರಾಮನಗೌಡ ಪಾಟೀಲ, ಮೀರಾಸಾಬ ಗದ್ಯಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net