ಮಾತೃ ಭಾಷೆ ಉಳಿಸಿ, ಬೆಳೆಸಿ

 ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ಪಿಯು ಕನ್ನಡ ಉಪನ್ಯಾಸಕರ ಪುನಃಶ್ಚೇತನ ಹಾಗೂ ಲಿತಾಂಶ ಸುಧಾರಣೆ ಕಾರ್ಯಗಾರವನ್ನು  ಪದವಿ ಪೂರ್ವ ವಿಭಾಗದ ನಿರ್ದೇಶಕ ಪುಂಡಲೀಕ ಕಾಂಬಳೆ ಉದ್ಘಾಟಿಸಿದರು. ಬಿ.ಕೆ. ಹಿರೇಮಠ, ಡಾ. ಸಿದ್ದರಾಯಪ್ಪ ಖಾನಾಪುರ, ಮೈನೂದ್ದೀನ ರೇವಡಿಗಾರ ಇತರರಿದ್ದರು.
ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ಪಿಯು ಕನ್ನಡ ಉಪನ್ಯಾಸಕರ ಪುನಃಶ್ಚೇತನ ಹಾಗೂ ಲಿತಾಂಶ ಸುಧಾರಣೆ ಕಾರ್ಯಗಾರವನ್ನು ಪದವಿ ಪೂರ್ವ ವಿಭಾಗದ ನಿರ್ದೇಶಕ ಪುಂಡಲೀಕ ಕಾಂಬಳೆ ಉದ್ಘಾಟಿಸಿದರು. ಬಿ.ಕೆ. ಹಿರೇಮಠ, ಡಾ. ಸಿದ್ದರಾಯಪ್ಪ ಖಾನಾಪುರ, ಮೈನೂದ್ದೀನ ರೇವಡಿಗಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಉಪನ್ಯಾಸಕರಿಗೆ ಪುನಃಶ್ಚೇತನ ಕಾರ್ಯಗಾರ
  • ನಿರ್ದೇಶಕ ಪುಂಡಲಿಕ ಕಾಂಬಳೆ ಹೇಳಿಕೆ
  • ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ಉಪನ್ಯಾಸಕರ ಮೇಲಿದೆ
ಬಾಗಲಕೋಟೆ: ಕನ್ನಡ ಭಾಷೆಯು ಜೀವನ ಮತ್ತು ಬದುಕು ಕೊಡುವ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಕೊಟ್ಟ ಭಾಷೆಯಾಗಿದೆ. ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ಉಪನ್ಯಾಸಕರ ಮೇಲಿದೆ ಎಂದು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ನಿರ್ದೇಶಕ ಪುಂಡಲಿಕ ಕಾಂಬಳೆ ಹೇಳಿದರು.
ಪದವಿ ಪೂರ್ವ ಪ್ರಾಚಾರ್ಯ ಮಹಾಮಂಡಳಿ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯ ಮಹಾಮಂಡಳ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಒಕ್ಕೂಟ ಇವರ ಸಹಯೋಗದಲ್ಲಿ ಕನ್ನಡ ಉಪನ್ಯಾಸಕರ ಪುನಃಶ್ಚೇತನ ಹಾಗೂ ಲಿತಾಂಶ ಸುಧಾರಣೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಲಿತಾಂಶ ಸುಧಾರಿಸಲು ಎಲ್ಲಾ ಉಪನ್ಯಾಸಕರು ಇನ್ನು ಹೆಚ್ಚಿನ ಪ್ರಯತ್ನ ಮಾಡಬೇಕಿದೆ ಎಂದರು.
ನಿವೃತ್ತರ ಪರವಾಗಿ ಬಿ.ಕೆ. ಹಿರೇಮಠ ಮಾತನಾಡಿ, ಉಪನ್ಯಾಸಕರು ತಾವು ಪಡೆದುಕೊಂಡ ಜ್ಞಾನವನ್ನು ಎಲ್ಲ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ನಿವೃತ್ತಿಯಾದ ನಂತರ ವೃತ್ತಿ ಜೀವನದ ನೆನಪುಗಳು ಸದಾ ಸ್ಮರಣೆಯಲ್ಲಿ ಉಳಿಯುತ್ತವೆ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಡಾ. ಸಿದ್ದರಾಯಪ್ಪ ಖಾನಾಪುರ ಮಾತನಾಡಿ, ಎಲ್ಲಾ ಉಪನ್ಯಾಸಕರು ತಮಗೆ ವಹಿಸಿರುವ ಪಿಯುಸಿ ವರ್ಗಗಳ ಕನ್ನಡ ವಿಷಯದ ನೀಲಿ ನಕ್ಷೆಯನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಬೇಕೆಂದು ತಿಳಿಸಿದರು.
ಹಳಗನ್ನಡ -ನಡುಗನ್ನಡ ಸಾಧ್ಯತೆಗಳು ಮತ್ತು ಸವಾಲುಗಳು ಕುರಿತು ಎಚ್.ಎಸ್. ರೇಣುಕಾರಾದ್ಯ ಹಾಗೂ ಹಳಗನ್ನಡ ಬೋಧನೆ ಕುರಿತು ಡಾ. ಮೈನೂದ್ದೀನ ರೇವಡಿಗಾರ ವಿಷಯ ಮಂಡಿಸಿದರು. ಮಹಾ ಮಂಡಳದ ಅಧ್ಯಕ್ಷ ಎಂ.ಎನ್. ವಂದಾಲ, ಭೀಮಪ್ಪ ಕುಂಬಾರ, ಚಿದಾನಂದ ಗಿರಿಸಾಗರ, ರವಿ ಗೌಡರ, ನಾಗರಾಜ ಮುದುಕಪ್ಪನವರ, ಎಸ್.ಡಿ. ಪಾಟೀಲ, ಉಮಾ ಬಾಗೇವಾಡಿ ಸೇರಿ ಜಿಲ್ಲೆಯ ಎಲ್ಲಾ ಪ್ರಾಚಾರ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net