ವಿವಿಕೆ ಫೌಂಡೇಶನ್ ೨ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಆ.೨೧ರಂದು ಬಾಗಲಕೋಟೆ ಜಿಲ್ಲಾ ಮಟ್ಟದ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಹಾಗೂ ರೈತರ ವಿಚಾರ ಸಂಕಿರಣ ನವನಗರದ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷೆ ವೀಣಾ ಕಾಶಪ್ಪನವರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ೯ ತಾಲೂಕುಗಳಿಂದ ಪ್ರತಿ ತಾಲೂಕಿಗೆ ಒರ್ವ ರೈತ ಹಾಗೂ ಓರ್ವ ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಕೃಷಿ ಮತ್ತು ಉದ್ಯಮಗಳಿಗೆ ಸಂಬ0ಧಿಸಿದ0ತೆ ೨೦ ಮಳಿಗೆಗಳು ಇರಲಿವೆ. ಬೆಂಗಳೂರ ಕೆಎಸ್‌ಟಿಎ ಸದಸ್ಯ ಡಾ.ಚಂದ್ರಶೇಖರ ಬಿರಾದಾರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕವಿತಾ ಮಿಶ್ರಾ ಅವರು ರೈತರಿಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇಳಕಲ್ಲ ವಿಜಯ ಮಹಾಂತೇಶ ಮಠದ ಡಾ.ಗುರುಮಹಾಂತ ಸ್ವಾಮೀಜಿ, ಶಿರೂರ ಮಹಂತತೀರ್ಥದ ಡಾ.ಬಸವಲಿಂಗ ಸ್ವಾಮೀಜಿ, ಬಿಲ್ ಕೆರೂರನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಽÃಶರು ಸಾನ್ನಿಧ್ಯ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೀಣಾ ಕಾಶಪ್ಪನವರ ಅಧ್ಯಕ್ಷತೆ ವಹಿಸುವರು. ಬಾಗಲಕೋಟೆ ಶಾಸಕ ಉಮೇಶ ಮೇಟಿ, ಜಿಲ್ಲಾಽಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ಧಾರ್ಥ ಗೋಯಲ್ ಉಪಸ್ಥಿತರಿರುವರು. ಜಿಲ್ಲೆಯ ರೈತರು ವಿಚಾರ ಸಂಕಿರಣದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
==========
ಸ್ಪರ್ಧೆ ಬಗ್ಗೆ ಸೂಕ್ತ ಸಮಯದಲ್ಲಿ ಹೇಳುವೆ :
ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಯಾವುದರಲ್ಲಿ ಸ್ಪರ್ಧೆ ಮಾಡಬೇಕು ಎಂದು ಸಮಯ, ಸಂದರ್ಭ ಬಂದಾಗ ಆ ಬಗ್ಗೆ ಮಾತನಾಡುವೆ. ೨೦೨೮ ಅಥವಾ ೨೦೨೯ ಯಾವುದಾದರೂ ಒಂದರಲ್ಲಿ ಸ್ಪರ್ಧೆ ಮಾಡುವುದಂತೂ ಖಚಿತ ಎಂದು ಪ್ರಶ್ನೆಯೊಂದಕ್ಕೆ ವೀಣಾ ತಿಳಿಸಿದರು.
ತಮ್ಮ ಮಾವನವರು ಹೊಂದಿದ್ದ ಸಣ್ಣ ಕೈಗಾರಿಕೆ ಇಲಾಖೆ ಇದೀಗ ತಮ್ಮ ಪತಿ ವಿಜಯಾನಂದ ಅವರಿಗೆ ಸಿಕ್ಕಿರುವುದು ಬಹಳ ಸಂತೋಷ ತಂದಿದೆ. ಇಲಾಖೆಯಲ್ಲಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ತಗ್ಗಿಸಲು ಸಾಕಷ್ಟು ಅವಕಾಶ ಇದ್ದು, ಟೆಕ್ಸಟೈಲ್ ಪಾರ್ಕ್, ಸಣ್ಣ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳುವಂತೆ ತಾವೂ ಸಹ ಸಚಿವರಿಗೆ ಮನವಿ ಮಾಡಿದ್ದು, ಅವರ ಅವಽಯಲ್ಲಿ ಜಿಲ್ಲೆಗೆ ಖಂಡಿತ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದರು.