ಬನಶಂಕರಿಯಲ್ಲಿ ನಡೆಯಲಿರುವ ದೇವಾಂಗ ಸಮಾವೇಶದ ಪೂರ್ವ ಸಿದ್ಧತೆಯನ್ನು ಸಂಘಟಕ ರವೀಂದ್ರ ಕಲಬುರ್ಗಿ ಮತ್ತು ಮುಖಂಡರು ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿದರು. ಟಿ. ರಾಜೇಶ, ಆನಂದ ಹುಲಮನಿ ಇತರರಿದ್ದರು.
ಬಾದಾಮಿ: ಸಮೀಪದ ಬನಶಂಕರಿಯಲ್ಲಿ ಮೇ 8, 9ರಂದು ನಡೆಯಲಿರುವ ಅಖಿಲ ಭಾರತ ದೇವಾಂಗ(ನೇಕಾರ) ಬೃಹತ್ ಜಾಗೃತ ಸಮಾವೇಶ ಹಾಗೂ ದಯಾನಂದಪುರಿ ಮಹಾಸ್ವಾಮೀಜಿಯವರ 36ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಜತೆಗೆ ಶ್ರೀಗಳ ತುಲಾಭಾರ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶದ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮತ್ತು ಸಮಿತಿಯವರು ಪರಿಶೀಲಿಸಿದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪಾಲನೆ, ಪೆಂಡಾಲ್ ಹಾಗೂ ಊಟೋಪಚಾರ ವಿಷಯದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ರಾಜೇಶ, ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ, ಗಾಯತ್ರಿ ಪೀಠದ ನಿರ್ದೇಶಕ ಅಮಾತೆಪ್ಪ ಕೊಪ್ಪಳ, ನಾಗೇಶ ಭಾವಿಕಟ್ಟಿ, ಸಂಕಣ್ಣ ಕರಡಿಗುಡ್ಡ, ಹನಮಂತ ಒಡ್ಡೊಡಗಿ, ಮಹೇಶ ಶೇಬಿನಕಟ್ಟಿ, ಬಸವರಾಜ ಒಡ್ಡೊಡಗಿ ಉಪಸ್ಥಿತರಿದ್ದರು.