

ಪ್ರಮುಖ ಮುಖ್ಯಾಂಶಗಳು
ಬಿಟಿಡಿಎ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಸಂತಸ ತಂದಿದೆ. ಬಾಗಲಕೋಟೆ ಸಂತ್ರಸ್ತರ ಬಗ್ಗೆ ಸಾಕಷ್ಟು ಅರಿವು ಇದೆ. ಪರಿಹಾರ ಧನ, ನಿವೇಶನ ಹಂಚಿಕೆ, ಇ-ಖಾತೆ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು. ಅಧಿಕಾರಿಗೊಂದಿಗೆ ಚರ್ಚೆ ನಡೆಸಿ ಸಂತ್ರಸ್ತರಿಗೆ ನೆಮ್ಮದಿ ತರುವ ಕೆಲಸ ಮಾಡಲಾಗುವುದು. ಪಕ್ಷಕ್ಕಾಗಿ ಮಾಡಿದ ಸೇವೆ ಪರಿಗಣಿಸಿ ಸ್ಥಾನಮಾನ ನೀಡಲಾಗಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಾಗುವುದು.
-ಪ್ರಕಾಶ ತಪಶೆಟ್ಟಿ ಬಿಟಿಡಿಎ ನಿಯೋಜಿತ ಅಧ್ಯಕ್ಷ
ಹಿರಿಯ ನಾಯಕ ಪ್ರಕಾಶ ತಪಶೆಟ್ಟಿ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಹಾಗೂ ದಿ. ಶಾಸಕ ಎಚ್.ವೈ. ಮೇಟಿ ಅವರ ಗೆಲುವಿಗಾಗಿ ಪ್ರತಿ ಚುನಾವಣೆಯಲ್ಲಿ ಶ್ರಮಿಸಿದ್ದಾರೆ. ಎಚ್.ವೈ. ಮೇಟಿ ಅವರ ಬಯಕೆಯಂತೆ ಹಾಗೂ ಪಕ್ಷದ ಸೇವೆ ಪರಿಗಣಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರಾದ ಆರ್.ಬಿ. ತಿಮ್ಮಾಪೂರ, ಎಂ.ಬಿ. ಪಾಟೀಲ ಅವರು ಇದಕ್ಕೆ ಮನ್ನಣೆ ನೀಡಿದ್ದಾರೆ.
-ಹೊಳಬಸ್ಸು ಶೆಟ್ಟರ, ಕಾಂಗ್ರೆಸ್ ಮುಖಂಡ