ಗುಳೇದಗುಡ್ಡದ ಭಂಡಾರಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಉದ್ಘಾಟಿಸಿದರು. ಮಾಜಿ ಶಾಸಕ ರಾಜಶೇಖರ ಶೀಲವಂತರ, ಪುರುಷೋತ್ತಮ ಜಂವಾರ, ಸಿದ್ದರಾಮಯ್ಯ ಪುರಾಣಿಮಠ, ಶ್ಯಾಮಸುಂದರ ಪಾಲಪಾಣಿ, ಪ್ರಾಚಾರ್ಯ ಡಾ ಎನ್.ವೈ.ಬಡಣ್ಣವರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಿದಾನಂದ ನಂದಾರ ಇದ್ದರು.
ಗುಳೇದಗುಡ್ಡ: ಯೋಗ ಭಾರತೀಯರ ಪರಂಪರೆಯಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ಯೋಗದಿಂದ ಆರೋಗ್ಯ ಭಾಗ್ಯವನ್ನು ಕಾಪಾಡಿಕೊಂಡು ಬಂದಿದ್ದು, ಭಾರತ ಜಗತ್ತಿಗೆ ಕೊಟ್ಟ ದೊಡ್ಡ ಕೊಡುಗೆ ಯೋಗ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಮ್ಮ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಯ್ದುಕೊಳ್ಳಲು ದಿನನಿತ್ಯ ಒಂದು ಗಂಟೆಯಾದರೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಒಳ್ಳೆಯ ಆಹಾರ ಮತ್ತು ಯೋಗಾಭ್ಯಾಸದಿಂದ ನಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಬೇಕು ಎಂದರು.
ಟ್ರಸ್ಟ್‌ನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸಹನಾ ಮಾನುಟಗಿ, ನೇತ್ರಾ ಗಂಜಿಹಾಳ, ಶ್ರೇಯಾ ಚಿಕ್ಕನರಗುಂದ ಅವರು ಯೋಗ ಪ್ರದರ್ಶನ ನೀಡಿದರು.
ಸಂಸ್ಥೆಯ ಪುರುಷೋತ್ತಮ ಜಂವಾರ, ಸಿದ್ದರಾಮಯ್ಯ ಪುರಾಣಿಮಠ, ಶ್ಯಾಮಸುಂದರ ಪಾಲಪಾಣಿ, ಪ್ರಾಚಾರ್ಯ ಡಾ ಎನ್.ವೈ.ಬಡಣ್ಣವರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಿದಾನಂದ ನಂದಾರ, ಸಣ್ಣವೀರಣ್ಣ ದೊಡಮನಿ, ಎಂ.ಎನ್.ಭಾವಿ, ಈರಣ್ಣ ಅಲದಿ, ಸುರೇಶ ಸಾರಂಗಿ, ಸಂಗಮೇಶ ಚಿಕ್ಕಾಡಿ ಉಪಸ್ಥಿತರಿದ್ದರು.