ಈ ಹಿಂದೆ ಜು.15ರಿಂದ ಸೀರೆ ನೇಯ್ಗೆ ಕಾರ್ಯವನ್ನು ಸ್ಥಗಿತಗೊಳಿಸುವುದಾಗಿ ಲಿಖಿತ ರೂಪದಲ್ಲಿ ಬರೆದು ಮಾಲಿಕರಿಗೆ ಎಚ್ಚರಿಕೆ ನೀಡಿದ್ದ ನೇಕಾರರು, ಬುಧವಾರದಿಂದ ಕಾರ್ಖಾನೆಗಳಿಗೆ ತೆರಳದೆ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಮಾಲೀಕರು ಮತ್ತು ನೇಕಾರರ ನಡುವಿನ ಭಿನ್ನಾಭಿಪ್ರಾಯವನ್ನು ಶೀಘ್ರವೇ ಮಾತುಕತೆ ಮೂಲಕ ಬಗೆಹರಿಸಬೇಕಿದ್ದು, ವಿಳಂಬವಾದರೆ ಎರಡೂ ವರ್ಗಗಳಿಗೂ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.