ಮಳೆಗಾಲ ಆರಂಭವಾಗಿ ಇಲ್ಲಿನ ಘಟಪ್ರಭಾ ನದಿಗೆ ಭರಪೂರ ನೀರು ಬರುತ್ತಿದ್ದಂತೆ ಕಾಲುವೆ ಮೂಲಕ ಜಾಕ್‌ವೆಲ್‌ಗೆ ನೀರು ಹರಿಸಿ ಅಲ್ಲಿಂದ ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಆರು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿತ್ತು. ಪ್ರತಿವರ್ಷದಂತೆ ಈ ವರ್ಷವೂ ಶಾಶಕ ಜೆ.ಟಿ. ಪಾಟೀಲರು ಕೆರ ತುಂಬಿಸುವ ಕಾರ್ಯಕ್ಕೆ ಜೂನ್ 20ರಂದು ಕೆರೆ ತುಂಬಿಸುವುದಾಗಿ ನಿರ್ಧಾರ ಮಾಡಿದ್ದರು. ಆದರೆ, ಜೂ.18ರಂದು ಮಧ್ಯಾಹ್ನ ಏಕಾಏಕಿ ಜಾಕ್‌ವೆಲ್‌ಗೆ ವಿದ್ಯುತ್ ಸಂಪರ್ಕ ನೀಡುವ 9ಎಂವಿಎ ಸಾಮರ್ಥ್ಯದ ಟಿಸಿ ಸುಡುವುದುರೊಂದಿಗೆ ಭಾರಿ ಸಮಸ್ಯೆ ತಂದೊಡ್ಡುವುದುರೊಂದಿಗೆ ರೈತರ ಚಿಂತೆಗೆ ಕಾರಣವಾಗಿದೆ.