ಅಧ್ಯಕ್ಷತೆ ವಹಿಸಿದ್ದ ತೋವಿವಿ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, ರೈತರಿಗೆ ಒಳ್ಳೆಯ ಬೀಜ, ಸಸ್ಯ ತಳಿಗಳು ಒಂದೆ ಕಡೆ ದೊರೆಯಲಿ ಎಂಬ ಸದ್ದುದ್ದೇಶದಿಂದ ತೋವಿವಿ ಪ್ರತಿ ವರ್ಷ ಜೂನ್, ಜುಲೈ ತಿಂಗಳಿನಲ್ಲಿ ಸಸ್ಯ ಸಂತೆ ಆಯೋಜಿಸುತ್ತದೆ. ಇದರ ಸದುಪಯೋಗವನ್ನು ಎಲ್ಲ ರೈತ ಬಾಂಧವರು, ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.